ಇತ್ತೀಚೆಗೆ ಸೊರಬದಲ್ಲಿ ನಡೆದ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ 'ಕಲಾ ವೈಭವ'ದಲ್ಲಿ ರೋಟರಿ ಕ್ಲಬ್ ತೀರ್ಥಹಳ್ಳಿಯು ಅತ್ಯುತ್ತಮ ಪ್ರದರ್ಶನ ನೀಡಿ, ಸಮೂಹ ಗಾನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ವಲಯದ ಒಟ್ಟು 7 ರೋಟರಿ ಕ್ಲಬ್ಗಳ ಸದಸ್ಯರು ಈ ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.
ಭಾಗವಹಿಸಿದ ಮತ್ತು ಪ್ರಶಸ್ತಿ ವಿಜೇತರ ವಿವರ:
- ಸಮೂಹ ಗಾಯನ (ಪ್ರಥಮ ಸ್ಥಾನ): ಶ್ರೀಮತಿ ಲತಾ ಶ್ರೀಕಾಂತ್, ರೊ. ನಯನಾ ಜೆ. ಶೆಟ್ಟಿ, ಶ್ರೀಮತಿ ವಿದ್ಯಾ ಶ್ರೀಧರ್, ರೊ. ಪ್ರತಿಮಾ, ರೊ. ಆಶಾ ಡೆನಿಯಲ್, ಶ್ರೀಮತಿ ಸುಮತಿ ಭರತ್ ಕುಮಾರ್, ಶ್ರೀಮತಿ ಶ್ವೇತಾ ಮನೋಜ್ ಆಚಾರ್ಯ ಮತ್ತು ರೊ. ಜ್ಯೋತಿ ದಿಲೀಪ್.
- ಡ್ಯೂಯೆಟ್ ಗಾಯನ (ದ್ವಿತೀಯ ಸ್ಥಾನ): ರೊ. ಡಾ. ಯು.ಕೆ. ನಂದಕಿಶೋರ್ ಹಾಗೂ ಶ್ರೀಮತಿ ಲತಾ ಶ್ರೀಕಾಂತ್.
- ಏಕಪಾತ್ರಾಭಿನಯ (ದ್ವಿತೀಯ ಸ್ಥಾನ): ರೊ. ರಾಘವೇಂದ್ರ ಆಚಾರ್ಯ ಗುಡ್ಡೇಕೊಪ್ಪ.
ಸ್ಪರ್ಧೆಯ ಒಟ್ಟು 7 ವಿಭಾಗಗಳಲ್ಲೂ ರೋಟರಿ ಕ್ಲಬ್ ತೀರ್ಥಹಳ್ಳಿಯ ಸದಸ್ಯರು ಭಾಗವಹಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ರೋಟರಿ ಕ್ಲಬ್ ತೀರ್ಥಹಳ್ಳಿಯ ಅಧ್ಯಕ್ಷರಾದ ರೊ. ಎಂ.ಎಚ್. ರಮೇಶ್ ಅವರ ಸಾರಥ್ಯದಲ್ಲಿ, ರೊ. ಬಿ.ವಿ. ಶ್ರೀಧರ್, ರೊ. ಭರತ್ ಕುಮಾರ್ ಪಿ.ವಿ., ರೊ. ಮನೋಜ್ ಆಚಾರ್ಯ, ರೊ. ಉಮಾ ಕೆ. ಸ್ವಾಮಿ, ರೊ. ನಟರಾಜ್ ಶೇಟ್ ಹಾಗೂ ರೊ. ಶ್ರೀಕಾಂತ್ ವೈ.ಟಿ. ಅವರು ವಿವಿಧ ವಿಭಾಗಗಳ ಸ್ಪರ್ಧೆಗಳಿಗೆ ಉತ್ತಮ ಮಾರ್ಗದರ್ಶನ ನೀಡಿದರು.
ವೇದಿಕೆಯಲ್ಲಿ ರೋಟರಿ ಕ್ಲಬ್ ಸೊರಬದ ಪೂರ್ವಾಧ್ಯಕ್ಷರಾದ ರೊ. ಜ್ಞಾನೇಶ್ ಎಚ್.ಇ. ಸ್ವಾಗತಿಸಿದರು. ನಿಯೋಜಿತ ಜಿಲ್ಲಾ
ಗವರ್ನರ್ ರೊ. ವಸಂತ್ ಹೋಬಳಿದಾರ್, ಸಹಾಯಕ ಗವರ್ನರ್ ರೊ. ಎಸ್. ನಾಗರಾಜ್, ವಲಯ ತರಬೇತುದಾರ ರೊ. ರವಿ ಕೊಟೊಜಿ, ಜೋನಲ್ ಕೋ ಆರ್ಡಿನೇಟರ್ ರೊ. ಕಿರಣ್ ಕುಮಾರ್ ಹಾಗೂ ವಲಯ ಕಾರ್ಯದರ್ಶಿ ರೊ. ಭರತ್ ಕುಮಾರ್ ಕೋಡ್ಲು ಅವರು ವಿಜೇತ ಸ್ಪರ್ಧಿಗಳಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.
ಗವರ್ನರ್ ರೊ. ವಸಂತ್ ಹೋಬಳಿದಾರ್, ಸಹಾಯಕ ಗವರ್ನರ್ ರೊ. ಎಸ್. ನಾಗರಾಜ್, ವಲಯ ತರಬೇತುದಾರ ರೊ. ರವಿ ಕೊಟೊಜಿ, ಜೋನಲ್ ಕೋ ಆರ್ಡಿನೇಟರ್ ರೊ. ಕಿರಣ್ ಕುಮಾರ್ ಹಾಗೂ ವಲಯ ಕಾರ್ಯದರ್ಶಿ ರೊ. ಭರತ್ ಕುಮಾರ್ ಕೋಡ್ಲು ಅವರು ವಿಜೇತ ಸ್ಪರ್ಧಿಗಳಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ತೀರ್ಥಹಳ್ಳಿಯ ನಿಯೋಜಿತ ಅಧ್ಯಕ್ಷ ರೊ. ಮಂಜುನಾಥ್ ಎಂ.ಆರ್., ಮಾಜಿ ಅಧ್ಯಕ್ಷ ರೊ. ಕೃಷ್ಣಸ್ವಾಮಿ ಕಲ್ಲಹಳ್ಳ ಹಾಗೂ ಕಾರ್ಯದರ್ಶಿ ರೊ. ಎಂ.ಸಿ. ಸಂಜಯ್ ಉಪಸ್ಥಿತರಿದ್ದು ವಿಜೇತರನ್ನು ಅಭಿನಂದಿಸಿದರು.

