ತೀರ್ಥಹಳ್ಳಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ತೀರ್ಥಹಳ್ಳಿ ಇಲ್ಲಿ ಅಕ್ಟೋಬರ್ 1, 2026ರ ಗುರುವಾರ ಒಂದು ದಿನದ “THE AI-POWERED DEVELOPER – Closing the Academic and Industry Gap Using GitHub and Other Software Tools” ವಿಷಯದ ಕುರಿತು ಕಾರ್ಯಾಗಾರ ನಡೆಯಿತು.
ಕಾರ್ಯಾಗಾರವನ್ನು ಡೆಲ್ ಟೆಕ್ನಾಲಜೀಸ್ ಸಂಸ್ಥೆಯ ಸೀನಿಯರ್ ಸಾಫ್ಟ್ವೇರ್ ಇಂಜಿನಿಯರ್ ಮಿಸ್ಟರ್ ಶ್ರೀ ಎಂಬುವವರು ನಡೆಸಿಕೊಟ್ಟರು. ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ (AI), GitHub ಸೇರಿದಂತೆ ವಿವಿಧ ಸಾಫ್ಟ್ವೇರ್ ಪರಿಕರಗಳ ಬಳಕೆ ಹಾಗೂ ಶೈಕ್ಷಣಿಕ ಜ್ಞಾನವನ್ನು ಉದ್ಯಮ ಕ್ಷೇತ್ರದ ಅಗತ್ಯಗಳಿಗೆ ಹೊಂದಿಸಿಕೊಳ್ಳುವ ಕುರಿತು ಪ್ರಾಯೋಗಿಕ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸೌಮ್ಯ ಕೆ.ಸಿ., ಐಕ್ಯೂಎಸಿ ಸಂಚಾಲಕರಾದ ಡಾ. ಗಣಪತಿ ಹೆಚ್.ಎ., ವಿಭಾಗ ಮುಖ್ಯಸ್ಥರಾದ ಶ್ರೀ ರಾಘವೇಂದ್ರ ಹೆಚ್.ಎಸ್., ಹಿರಿಯ ಉಪನ್ಯಾಸಕರಾದ ಶ್ರೀ ಸತ್ಯದೀಪ್ ಬಿ.ಆರ್. ಸೇರಿದಂತೆ ಕಾಲೇಜಿನ ಉಪನ್ಯಾಸಕರು ಹಾಗೂ ಬಿಸಿಎ ಮತ್ತು ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಾಗಾರದಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಇ-ಸರ್ಟಿಫಿಕೇಟ್ಗಳನ್ನು ವಿತರಿಸಲಾಯಿತು.
