ಮಲೆನಾಡು • ಸ್ಥಳೀಯ ಸುದ್ದಿ • ಕನ್ನಡದ ಧ್ವನಿ ಪ್ರತಿಬಿಂಬ
ನಮ್ಮ ಊರಿನ ಸುದ್ದಿ — ನಮ್ಮ ಧ್ವನಿ
ತಾಜಾ ಸುದ್ದಿ
ಪ್ರತಿಬಿಂಬಕ್ಕೆ ಸ್ವಾಗತ • ಸ್ಥಳೀಯ ಮತ್ತು ಮಲೆನಾಡಿನ ಸುದ್ದಿಗಳನ್ನು ವೇಗವಾಗಿ ಓದಿ

ಪೆಟ್ರೋಲ್ ಬಂಕ್‌ನಲ್ಲಿ ಕಳ್ಳತನ: ಕಂಪ್ಯೂಟರ್ ವ್ಯವಸ್ಥೆಗಳಿಗೆ ಹಾನಿ

 


ತೀರ್ಥಹಳ್ಳಿ–ಕೊಪ್ಪ ರಸ್ತೆಯಲ್ಲಿರುವ ಸಹ್ಯಾದ್ರಿ ಪೆಟ್ರೋಲ್ ಬಂಕ್‌ನಲ್ಲಿ ಆಯಿಲ್ ರೂಮಿನ ಮೇಲ್ಛಾವಣಿಯ ಶೀಟ್‌ನ್ನು ಕೊರೆದು ಕಳ್ಳರು ಒಳನುಗ್ಗಿ, ಆಯಿಲ್ ಬಾಕ್ಸ್‌ಗಳು ಹಾಗೂ ನಗದು ಹಣವನ್ನು ಕೊಂಡೊಯ್ದಿದ್ದಾರೆ.

ಆಯಿಲ್ ರೂಮಿನ ಕೊಠಡಿಯ ಕಿಟಕಿಯ ಗ್ಲಾಸನ್ನು ಒಡೆದು ಆಫೀಸ್ ರೂಮಿಗೂ ನುಗ್ಗಿದ ಕಳ್ಳರು ಕಂಪ್ಯೂಟರ್ ಹಾಗೂ ಪ್ರಾಡಕ್ಟ್ ಬರುವ ಸಿಸ್ಟಮ್‌ಗಳಿಗೂ ಹಾನಿ ಮಾಡಿರುವುದರಿಂದ ಬಂಕ್‌ನಲ್ಲಿ ಗ್ರಾಹಕರಿಗೆ ಇಂಧನ ಪೂರೈಸಲು ಸಾಧ್ಯವಾಗದಂತಾಗಿದೆ.

ಆಫೀಸ್ ರೂಮಿನ ಸಿಸಿ ಕ್ಯಾಮೆರಾದ ಮೇಲೂ ಕಳ್ಳನೊಬ್ಬ ಬಟ್ಟೆಯನ್ನು ಹಾಕಿರುವುದು ಕಂಡುಬಂದಿದೆ.

ಬಂಕ್‌ನ ಮಾಲೀಕರಾದ ಗೌತಮ್ ಕೊಳಾವರ ಅವರು ಈ ಸಂಬಂಧ ತೀರ್ಥಹಳ್ಳಿ ಪೊಲೀಸರಿಗೆ ದೂರು ನೀಡಿ, ಶೀಘ್ರ ಕಳ್ಳರನ್ನು ಪತ್ತೆಹಚ್ಚುವಂತೆ ವಿನಂತಿಸಿದ್ದಾರೆ. ಪೆಟ್ರೋಲ್  ವಿತರಕರ ಸಂಘದವರೂ ಕಳ್ಳರನ್ನು ಶೀಘ್ರ ಪತ್ತೆಹಚ್ಚುವಂತೆ ಪೊಲೀಸರಿಗೆ ಕೋರಿದ್ದಾರೆ.