ಯಾವುದೇ ಸರ್ಕಾರಿ ನೌಕರ ಅಪರಾಧಿಕ ಪ್ರಕರಣ ಅಥವಾ ಲಂಚ ಸ್ವೀಕಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ, 48 ಗಂಟೆಗಳಿಗಿಂತ ಹೆಚ್ಚು ಕಾಲ ನ್ಯಾಯಾಂಗ ಬಂಧನದಲ್ಲಿದ್ದರೆ (Judicial Custody), ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ 'ಸ್ವಯಂಚಾಲಿತ ಅಮಾನತು' (Deemed Suspension) ಎಂದು ಣಿಸಲಾಗುತ್ತದೆ. ಇದಕ್ಕಾಗಿ ಇಲಾಖೆಯು ಪ್ರತ್ಯೇಕವಾಗಿ ಅಮಾನತು ಆದೇಶ ಹೊರಡಿಸುವ ಅಗತ್ಯವಿಲ್ಲ ಎಂದು ಭಾರತದ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಜಸ್ಟಿಸ್ ಜೆ. ಬಿ. ಪಾರ್ದಿವಾಲಾ (Justice J. B. Pardiwala) ಮತ್ತು ನ್ಯಾಯಮೂರ್ತಿ ಮನ್ಮೋಹನ್ (Justice Manmohan) ಅವರನ್ನೊಳಗೊಂಡ ಪೀಠ. ವಿಶ್ವಜೀತ್ ಸಿಂಗ್ ವಿರುದ್ಧ ಬಿಹಾರ ರಾಜ್ಯ ಸರ್ಕಾರ ಮತ್ತು ಇತರರು ೨೦೨೫ ರಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆ (Prevention of Corruption Act) ಸೆಕ್ಷನ್ 7(ಬಿ) ಅಡಿಯಲ್ಲಿ ಲಂಚ ಆರೋಪದ ಮೇರೆಗೆ ವಿಶ್ವಜೀತ್ ಸಿಂಗ್ ಬಂಧನಕ್ಕೊಳಗಾಗಿದ್ದರು. ಪಟ್ನಾ ಹೈಕೋರ್ಟ್ ಇವರ ಜಾಮೀನನ್ನು ರದ್ದುಗೊಳಿಸಿತ್ತು ಅದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅಪೀಲು ಹಾಕಿದ್ದ ಸಂಧರ್ಬ ಪ್ರಕರಣ ಕೈಗೆತ್ತಿಕೊಂಡ ನ್ಯಾಯಾಲವು ಆರೋಪದ ಸ್ವರೂಪ, ತನಿಖೆಯ ಹಂತ ಮತ್ತು ಕ್ರಿಮಿನಲ್ ಹಿನ್ನೆಲೆಯನ್ನು ಆಧರಿಸಿ ನ್ಯಾಯಾಲಯಗಳು ಜಾಮೀನು ನಿರ್ಧಾರ ಕೈಗೊಳ್ಳಬೇಕು. ತನಿಖೆಗೆ ಅಡ್ಡಿಪಡಿಸುವ ಸಾಧ್ಯತೆ ಇಲ್ಲದಿದ್ದರೆ ಜಾಮೀನು ನೀಡಬಹುದು ಎಂದು ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ಸಿಂಗ್ ಅವರಿಗೆ ಜಾಮೀನು ಎತ್ತಿಹಿಡಿದಿದೆ.
48 ಗಂಟೆಗಳ ಕಾಲ ಬಂಧನದಲ್ಲಿದ್ದ ತಕ್ಷಣ ನಿಯಮಾವಳಿಗಳ ಪ್ರಕಾರ 'ಸ್ವಯಂಚಾಲಿತ ಅಮಾನತು' ಜಾರಿಗೆ ಬರುತ್ತದೆ. ಇಲಾಖಾಧಿಕಾರಿಗಳು ತೀರ್ಮಾನ ತೆಗೆದುಕೊಳ್ಳುವವರೆಗೆ ಕಾಯುವಂತಿಲ್ಲ.
ನೌಕರನಿಗೆ ಜಾಮೀನು ದೊರೆತರೂ ಅಮಾನತು ತಾನಾಗಿಯೇ ರದ್ದಾಗುವುದಿಲ್ಲ. ಪ್ರಕರಣದ ಸ್ವರೂಪ ಮತ್ತು ತೀವ್ರತೆಯನ್ನು ಪರಿಶೀಲಿಸಿ, ಪ್ರಾಧಿಕಾರವು ಪ್ರತ್ಯೇಕ ಆದೇಶದ ಮೂಲಕವೇ ಅಮಾನತು ಹಿಂಪಡೆಯಬೇಕಾಗುತ್ತದೆ ಎಂದು ಸ್ಪಷ್ಟಪರಿಸಿದೆ.
ಸಾರ್ವಜನಿಕ ಸೇವೆಯ ಪಾರದರ್ಶಕತೆ, ಘನತೆ ಮತ್ತು ದುರಾಡಳಿತ ನಿಯಂತ್ರಣದ ದೃಷ್ಟಿಯಿಂದ ಈ ತೀರ್ಪು ಅತ್ಯಂತ ಪ್ರಮುಖ ಮೈಲಿಗಲ್ಲಾಗಿದೆ.
ಸರ್ಕಾರಿ ನೌಕರರೊಬ್ಬರು ಯಾವುದೇ ಅಪರಾಧಿಕ ಪ್ರಕರಣ ಅಥವಾ ವಿಚಾರಣೆಗೆ ಸಂಬಂಧಿಸಿದಂತೆ 48 ಗಂಟೆಗಳ ಕಾಲ ಪೊಲೀಸ್ ಅಥವಾ ನ್ಯಾಯಾಂಗ ಬಂಧನದಲ್ಲಿದ್ದರೆ, ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಎಂದು ಪರಿಗಣಿಸಲಾಗುತ್ತದೆ.
48 ಗಂಟೆಗಳ ಜೈಲುವಾಸ ಪೂರ್ಣಗೊಂಡ ತಕ್ಷಣ ಈ ನಿಯಮ ಅನ್ವಯವಾಗುತ್ತದೆ. ಇದಕ್ಕೆ ಸಂಬಂಧಪಟ್ಟ ಇಲಾಖಾಧಿಕಾರಿಗಳ ಪ್ರತ್ಯೇಕ ಆದೇಶ ಅಥವಾ ವಿವೇಚನಾಧಿಕಾರದ ಅಗತ್ಯವಿರುವುದಿಲ್ಲ.
ಬಂಧಿತ ನೌಕರನಿಗೆ ಜಾಮೀನು ದೊರೆತರೂ ಅಥವಾ ಜೈಲಿನಿಂದ ಬಿಡುಗಡೆಯಾದರೂ ಅಮಾನತು ಆದೇಶ ತಾನಾಗಿಯೇ ರದ್ದಾಗುವುದಿಲ್ಲ.
ನಿಯಮಗಳ ಪ್ರಕಾರ, ಸಂಬಂಧಪಟ್ಟ ಪ್ರಾಧಿಕಾರವು ಪ್ರಕರಣದ ತೀವ್ರತೆಯನ್ನು ಪರಿಶೀಲಿಸಿ ಪ್ರತ್ಯೇಕವಾಗಿ ಅಮಾನತು ಹಿಂಪಡೆಯುವ (Revocation) ಆದೇಶ ಹೊರಡಿಸಬೇಕಾಗುತ್ತದೆ.
ಅಮಾನತಿನಲ್ಲಿರುವ ಅವಧಿಯಲ್ಲಿ ನೌಕರನಿಗೆ ವೇತನ ನೀಡಲಾಗುವುದಿಲ್ಲ, ಆದರೆ ಸಂಬಳದ ಶೇ50ರಷ್ಟು ಜೀವನಾಧಾರ ಭತ್ಯೆ ದೊರೆಯುತ್ತದೆ. ನ್ಯಾಯಾಲಯದಲ್ಲಿ ಆರೋಪ ಮುಕ್ತರಾಗಿ ಸಂಪೂರ್ಣವಾಗಿ ಖುಲಾಸೆಗೊಂಡರೆ ಮಾತ್ರ ಹಿಂಬಾಕಿ ವೇತನ ಮತ್ತು ಸೇವಾ ಹಿರಿತನ ಪುನಃ ಲಭಿಸುತ್ತದೆ.
