ಮಲೆನಾಡು • ಸ್ಥಳೀಯ ಸುದ್ದಿ • ಕನ್ನಡದ ಧ್ವನಿ ಪ್ರತಿಬಿಂಬ
ನಮ್ಮ ಊರಿನ ಸುದ್ದಿ — ನಮ್ಮ ಧ್ವನಿ
ತಾಜಾ ಸುದ್ದಿ
ಪ್ರತಿಬಿಂಬಕ್ಕೆ ಸ್ವಾಗತ • ಸ್ಥಳೀಯ ಮತ್ತು ಮಲೆನಾಡಿನ ಸುದ್ದಿಗಳನ್ನು ವೇಗವಾಗಿ ಓದಿ

ಆತಂಕ ದೂರಮಾಡಿದ ಅದಾನಿ, ಇನ್ಫೋಸಿಸ್, ಟಾಟಾ: ಪ್ರಮುಖ ಕಂಪನಿಗಳ ಭರ್ಜರಿ Q2 ಫಲಿತಾಂಶ!

 ಪ್ರಮುಖ ಕಂಪನಿಗಳ ದ್ವಿತೀಯ ತ್ರೈಮಾಸಿಕದ (Q2) ಆರ್ಥಿಕ ಸಾಧನೆ ಪ್ರಗತಿಯತ್ತ

ಪ್ರಸಕ್ತ ಆರ್ಥಿಕ ಸಾಲಿನ ದ್ವಿತೀಯ ತ್ರೈಮಾಸಿಕದ (Q2 FY27) ಫಲಿತಾಂಶಗಳು ಅಧಿಕೃತವಾಗಿ ಹೊರಬಂದಿವೆ. ವಿವಿಧ ವಲಯಗಳ ಪ್ರಮುಖ ಕಂಪನಿಗಳು ಕಳೆದ ಸಾಲಿನ ಇದೇ ಅವಧಿಗೆ ಹೋಲಿಸಿದರೆ ಸಾಧಿಸಿರುವ ಪ್ರಗತಿ,  ಹಾಗೂ ಡಿವಿಡೆಂಡ್‌ ವಿವರಗಳು ಇಂದು ಕಂಪೆನಿ ತನ್ನ ಸಭೆಯಲ್ಲಿ ಬಿಡುಗಡೆ ಮಾಡಿದ ಮಾಹಿತಿ ಈ ಕೆಳಗಿನಂತಿದೆ.

ಇನ್ಫೋಸಿಸ್ (Infosys): ಸ್ಥಿರ ಬೆಳವಣಿಗೆಯ ಹಾದಿಯಲ್ಲಿ ಐಟಿ ದಿಗ್ಗಜ

ತಂತ್ರಜ್ಞಾನ ಕ್ಷೇತ್ರದಲ್ಲೂ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವ ಇನ್ಫೋಸಿಸ್ ಕಂಪನಿಯು ಪ್ರಸಕ್ತ ಸಾಲಿನ ಎರಡನೇ ತ್ರೈಮಾಸಿಕದಲ್ಲಿ ತನ್ನ ಆರ್ಥಿಕ ಚಟುವಟಿಕೆಗಳಲ್ಲಿ ಸಕಾರಾತ್ಮಕ ಸುಧಾರಣೆಯನ್ನು ದಾಖಲಿಸಿದೆ.  ಕಳೆದ ಸಾಲಿನ ಇದೇ ಅವಧಿಗೆ ಹೋಲಿಸಿದರೆ ಕಂಪನಿಯು ತನ್ನ ಸಂಯೋಜಿತ ನಿವ್ವಳ ಲಾಭದಲ್ಲಿ ಶೇ. 6 ರಷ್ಟು ಹೆಚ್ಚಳವನ್ನು ಸಾಧಿಸಿದ್ದು, ಒಟ್ಟು ಲಾಭವು ₹7,838 ಕೋಟಿ ತಲುಪಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಐಟಿ ವೆಚ್ಚದ ಅನಿಶ್ಚಿತತೆಯ ನಡುವೆಯೂ ಕಂಪನಿಯು ತನ್ನ ಆಪರೇಟಿಂಗ್ ಮಾರ್ಜಿನ್ ಅನ್ನು ಶೇ. 21.1 ರಷ್ಟು ಭದ್ರವಾಗಿ ಕಾಯ್ದುಕೊಂಡಿರುವುದು ವಿಶೇಷ. 

ಹೊಸ ಡಿಜಿಟಲ್ ಹಾಗೂ ಕೃತಕ ಬುದ್ಧಿಮತ್ತೆ (AI) ಆಧಾರಿತ ಪ್ರಾಜೆಕ್ಟ್‌ಗಳ ಒಪ್ಪಂದಗಳು ಕಂಪನಿಯ ಆದಾಯವನ್ನು ಹೆಚ್ಚಿಸಲು ನೆರವಾಗಿವೆ. ಒಟ್ಟಾರೆಯಾಗಿ, ನಿರೀಕ್ಷಿತ ಸವಾಲುಗಳನ್ನು ಎದುರಿಸುತ್ತಲೇ ಇನ್ಫೋಸಿಸ್ ತನ್ನ ವಹಿವಾಟಿನಲ್ಲಿ ವೃದ್ಧಿ ಸಾಧಿಸಿದೆ.

 ಐಟಿ ದಿಗ್ಗಜ ಇನ್ಫೋಸಿಸ್ ಕಂಪನಿಯು ಪ್ರತಿ ಷೇರಿಗೆ ಮಧ್ಯಂತರ ಡಿವಿಡೆಂಡ್‌ (Interim Dividend) ಘೋಷಿಸಿದ್ದು, ದೀರ್ಘಕಾಲಿಕ ಹೂಡಿಕೆದಾರರಿಗೆ ಇದು ಸಕಾರಾತ್ಮಕ ಅಂಶವಾಗಿದೆ. ಕಂಪನಿಯು ತನ್ನ ಸ್ಥಿರವಾದ ಹಣಕಾಸು ನಿರ್ವಹಣೆಯ ಭಾಗವಾಗಿ ಷೇರುದಾರರಿಗೆ ನಿಯಮಿತವಾಗಿ ಲಾಭಾಂಶ ಹಂಚಿಕೆ ಮಾಡುವ ಸಂಪ್ರದಾಯವನ್ನು ಈ ಬಾರಿಯೂ ಮುಂದುವರೆಸಿದೆ.

ಅದಾನಿ ಪವರ್ (Adani Power): ಇಂಧನ ವಲಯದಲ್ಲಿ ದಾಖಲೆಯ ಜಿಗಿತ

ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅದಾನಿ ಪವರ್ ಈ ಬಾರಿಯ ತ್ರೈಮಾಸಿಕದಲ್ಲಿ ಅಸಾಧಾರಣ ಆರ್ಥಿಕ ಫಲಿತಾಂಶದ ಮೂಲಕ ಮಾರುಕಟ್ಟೆಯ ಗಮನ ಸೆಳೆದಿದೆ ಕಂಪನಿಯು ತನ್ನ ನಿವ್ವಳ ಲಾಭದಲ್ಲಿ ಭರ್ಜರಿ ಶೇ. 142 ರಷ್ಟು ಪ್ರಚಂಡ ಏರಿಕೆಯನ್ನು ದಾಖಲಿಸಿದ್ದು, ಒಟ್ಟು ಲಾಭವು ₹7,019 ಕೋಟಿಗೆ ಮುಟ್ಟಿದೆ (ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದು ಬಹುಪಟ್ಟು ಹೆಚ್ಚಾಗಿದೆ.

 ವಿದ್ಯುತ್ ಬೇಡಿಕೆಯಲ್ಲಿನ ತೀವ್ರ ಹೆಚ್ಚಳ, ಕಾರ್ಯಾಚರಣೆಯ ವಿಸ್ತರಣೆ (Thermal Expansion) ಹಾಗೂ ಹಿಂದಿನ ಸುಂಕಗಳಿಗೆ ಸಂಬಂಧಿಸಿದಂತೆ ಬಂದಿರುವ ಒಟ್ಟು ಮೊತ್ತದ ಹೊಂದಾಣಿಕೆಗಳು (Prior period revenue recognition) ಈ ಬೃಹತ್ ಲಾಭಕ್ಕೆ ಪ್ರಮುಖ ಕಾರಣಗಳಾಗಿವೆ. ಒಟ್ಟಾರೆ ಆದಾಯ ಮತ್ತು ಲಾಭಾಂಶ ಎರಡರಲ್ಲೂ ಕಂಪನಿಯು ಬಲವಾದ ಧನಾತ್ಮಕ ಬೆಳವಣಿಗೆಯನ್ನು ಪ್ರದರ್ಶಿಸಿದೆ.

 ಅದಾನಿ ಪವರ್ ಕಂಪನಿಯು ತನ್ನ ನಿವ್ವಳ ಲಾಭದಲ್ಲಿ ದಾಖಲೆ ಮಟ್ಟದ ಜಿಗಿತ ಕಂಡಿದ್ದರೂ ಸಹ, ಈ ತ್ರೈಮಾಸಿಕದಲ್ಲಿ ಯಾವುದೇ ಹೊಸ ಡಿವಿಡೆಂಡ್‌ ಘೋಷಿಸಿಲ್ಲ. ಕಂಪನಿಯು ತನ್ನ ಗಳಿಸಿದ ಬೃಹತ್ ಲಾಭವನ್ನು ಹೂಡಿಕೆದಾರರಿಗೆ ಹಂಚುವ ಬದಲು, ಮುಂಬರುವ ದೊಡ್ಡ ಮಟ್ಟದ ಮೂಲಭೂತ ಸೌಕರ್ಯ ವಿಸ್ತರಣೆ, ಥರ್ಮಲ್ ಪ್ರಾಜೆಕ್ಟ್‌ಗಳು ಹಾಗೂ ಸಾಲ ಮರುಪಾವತಿಗೆ ಮತ್ತು ಮರುಹೂಡಿಕೆ ಮಾಡುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿದೆ. ಅಲ್ಪಾವಧಿಯ ಲಾಭಾಂಶ ಬಯಸುವವರಿಗೆ ಇದು ನಿರಾಶೆಯಾಗಿದೆ.

ಟಾಟಾ ಮೋಟರ್ಸ್ (Tata Motors): ನಷ್ಟದಿಂದ ಲಾಭದತ್ತ ಅದ್ಭುತ ಮರುಪ್ರವೇಶ

ವಾಹನ ತಯಾರಿಕಾ ರಂಗದ ದಿಗ್ಗಜವಾಗಿರುವ ಟಾಟಾ ಮೋಟರ್ಸ್, ಕಳೆದ ಸಾಲಿನ ಸೆಪ್ಟೆಂಬರ್‌ ಫಲಿತಾಂಶದಲ್ಲಿ ತೋರಿಸಿದ್ದ ಹಿನ್ನಡೆಯನ್ನು ಮೀರಿ ಈ ಬಾರಿ ಭದ್ರವಾದ ಆರ್ಥಿಕ ಚೇತರಿಕೆ ಕಂಡುಕೊಂಡಿದೆ. ಕಳೆದ ಆರ್ಥಿಕ ಸಾಲಿನ ಇದೇ ತ್ರೈಮಾಸಿಕದಲ್ಲಿ ಕಂಪನಿಯು ಸುಮಾರು ₹561 ಕೋಟಿಗಳಷ್ಟು ತೆರಿಗೆಪೂರ್ವ ನಷ್ಟವನ್ನು ಮತ್ತು ಒಟ್ಟಾರೆಯಾಗಿ ₹867 ಕೋಟಿಗಳಷ್ಟು ನಿವ್ವಳ ನಷ್ಟವನ್ನು  ಅನುಭವಿಸಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ಅದರಿಂದ ಸಂಪೂರ್ಣವಾಗಿ ಹೊರಬಂದು ಕಳೆದಸಾರಿ ಮಾರ್ಚಿಯಲ್ಲಿ ಬರೋಬ್ಬರಿ ₹2,556 ರೂಲಾಭಗಳಿಸಿದರೆ ಸೆಪ್ಟೆಂಬರ್‌ ₹1,254 ಕೋಟಿ ನಿವ್ವಳ ಲಾಭವನ್ನು ಗಳಿಸಿದೆ.

ವಾಣಿಜ್ಯ ವಾಹನಗಳ ವಿಭಾಗದಲ್ಲಿ ದೇಶೀಯವಾಗಿ ಹೆಚ್ಚಿದ ಬೇಡಿಕೆ ಹಾಗೂ ಉತ್ಪಾದನಾ ವೆಚ್ಚದ ಸಮರ್ಥ ನಿರ್ವಹಣೆಯು ಕಂಪನಿಯ ಆದಾಯವನ್ನು ಹೆಚ್ಚಿಸಲು ಕಾರಣವಾಗಿದೆ. ಆಟೋ ವಲಯದ ದೃಷ್ಟಿಯಿಂದ ಇದು ಅತ್ಯಂತ ಸಕಾರಾತ್ಮಕ ಬೆಳವಣಿಗೆಯಾಗಿದೆ.

ಈ ಬಾರಿಯ ತ್ರೈಮಾಸಿಕದಲ್ಲಿ ಕಂಪನಿಯು ತನ್ನ ಬಂಡವಾಳ ಕ್ರೋಢೀಕರಣ ಮತ್ತು ವಾಣಿಜ್ಯ ವಾಹನ ವಿಭಾಗದ ಬಲವರ್ಧನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ.

ಪ್ರಸಕ್ತ ಸಾಲಿನ ದ್ವಿತೀಯ ತ್ರೈಮಾಸಿಕದ ಈ ಅಂಕಿಅಂಶಗಳನ್ನು ಗಮನಿಸಿದರೆ, ಆರ್ಥಿಕತೆಯ ವಿವಿಧ ವಲಯಗಳು ವಿಭಿನ್ನ ಹಾದಿಯಲ್ಲಿ ಸಾಗುತ್ತಿರುವುದು ಸ್ಪಷ್ಟವಾಗುತ್ತದೆ: