ಮಲೆನಾಡು • ಸ್ಥಳೀಯ ಸುದ್ದಿ • ಕನ್ನಡದ ಧ್ವನಿ ಪ್ರತಿಬಿಂಬ
ನಮ್ಮ ಊರಿನ ಸುದ್ದಿ — ನಮ್ಮ ಧ್ವನಿ
ತಾಜಾ ಸುದ್ದಿ
ಪ್ರತಿಬಿಂಬಕ್ಕೆ ಸ್ವಾಗತ • ಸ್ಥಳೀಯ ಮತ್ತು ಮಲೆನಾಡಿನ ಸುದ್ದಿಗಳನ್ನು ವೇಗವಾಗಿ ಓದಿ

"ಬೊಂಬೆ ಹೇಳುತೈತೆ ಕೇಳಿ ಕಥೆಯ... ಜಾನಪದ ಸಿರಿ ನೈಸರ್ಗಿಕ ಸಂಭ್ರಮದ ಬೊಮ್ಮಾಯಿ ಹಬ್ಬದ ಬೊಂಬೆ ಕೂರಿಸುವ ಸಂಭ್ರಮ"

ನವರಾತ್ರಿ ಬೊಂಬೆ ಹೇಳುತೈತೆ
  • ಬೊಂಬೆ ಹಬ್ಬ ಮತ್ತು ಬೊಮ್ಮಾಯಿ ಹಬ್ಬ ಒಂದು ವಿಶ್ಲೇಷಣೆ : ದಕ್ಷಿಣ ಭಾರತದ ಭಾಷೆಗಳಲ್ಲಿ (ವಿಶೇಷವಾಗಿ ಕನ್ನಡ, ತೆಲುಗು ಮತ್ತು ತುಳು ಮಿಶ್ರಿತ ಸಂಸ್ಕೃತಿಯಲ್ಲಿ) 'ಬೊಮ್ಮ' ಅಥವಾ 'ಬೊಮ್ಮಾಯಿ' ಎಂದರೆ ಮಣ್ಣಿನಿಂದ ಅಥವಾ ಕವಚದಿಂದ ನಿರ್ಮಿಸಿದ ಮೂರ್ತಿ ಅಥವಾ ಗೊಂಬೆ ಎಂದರ್ಥ.

  • ನವರಾತ್ರಿ ಬೊಂಬೆ ಹೇಳುತೈತೆ
  • ನವರಾತ್ರಿ ಎಂದರೆ ಕೇವಲ ಒಂಬತ್ತು ದಿನಗಳ ಪೂಜೆ-ಪುರಸ್ಕಾರಗಳಷ್ಟೇ ಅಲ್ಲ, ಅದು ಮನೆಮನೆಗಳಲ್ಲಿ ಸಾಂಸ್ಕೃತಿಕ ಚೈತನ್ಯವನ್ನು ಜಾಗೃತಗೊಳಿಸುವ ಹಬ್ಬ. ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ಕರ್ನಾಟಕ ಮತ್ತು ಮೈಸೂರು ಸಂಸ್ಥಾನದ ವ್ಯಾಪ್ತಿಯಲ್ಲಿ ನವರಾತ್ರಿಯ ಅತ್ಯಂತ ಸುಂದರ ಹಾಗೂ ಆಕರ್ಷಕ ಆಚರಣೆ ಎಂದರೆ ಅದು 'ಬೊಮ್ಮಾಯಿ ಹಬ್ಬ' (ಗೊಂಬೆ ಕೂರಿಸುವುದು). ನವರಾತ್ರಿಯ 'ಬೊಮ್ಮಾಯಿ ಹಬ್ಬ'ವು ಕೇವಲ ಗತಕಾಲದ ನೆನಪಲ್ಲ, ಅದು ದಾಸರ ವಾಣಿಯಂತೆ ನಮ್ಮ ಬದುಕಿನ ದರ್ಶನ ಮಾಡಿಸುವ ಹಾಗೂ ಮಲೆನಾಡಿನ ಹಸಿರು ಪರಿಸರದ ಸೊಗಡನ್ನು ಬಿಂಬಿಸುವ ಸಾಂಸ್ಕೃತಿಕ ಜೀವಂತ ಉಸಿರು. ಮಣ್ಣಿನ ಬೊಂಬೆಗಳಲ್ಲಿ ಜಾನಪದದ ಸಿರಿ, ದಾಸರ ಭಕ್ತಿ ಮತ್ತು ಮಲೆನಾಡಿನ ಮಣ್ಣಿನ ಘಮಕ್ಕೆ ಎಲ್ಲವನ್ನೂ ಜೀವಂತವಾಗಿಸುವ ಕಲೆ ಮೂಡಿ ಬಂದಿದೆ.
    ನವರಾತ್ರಿ ಬೊಂಬೆ ಹೇಳುತೈತೆ
  • 'ಬೊಮ್ಮಾಯಿ ಹಬ್ಬ' ಉಲ್ಲೇಖ ಮತ್ತು ಪೌರಾಣಿಕ ಹಿನ್ನೆಲೆ : ವಿಜಯನಗರ ಹಾಗೂ ಮೈಸೂರು ಅರಸರ ಪರಂಪರೆ: ಬೊಮ್ಮಾಯಿ ಹಬ್ಬದ ಸ್ಪಷ್ಟ ಐತಿಹಾಸಿಕ ಉಲ್ಲೇಖಗಳು ವಿಜಯನಗರ ಸಾಮ್ರಾಜ್ಯದ ಕಾಲದಿಂದ ಸಿಗುತ್ತವೆ. ಮುಂದೆ ಮೈಸೂರು ಒಡೆಯರ ಕಾಲದಲ್ಲಿ ನವರಾತ್ರಿಯ ದರ್ಬಾರ್ ಜತೆಗೆ ಮನೆಮನೆಗಳಲ್ಲಿ 'ಪಟ್ಟದ ಬೊಮ್ಮಾಯಿ' (ರಾಜ-ರಾಣಿಯರ ಗೊಂಬೆ) ಕೂರಿಸುವ ಪದ್ಧತಿ ಅತ್ಯಂತ ಪ್ರಸಿದ್ಧಿಯಾಯಿತು. ಪೌರಾಣಿಕ ಹಿನ್ನೆಲೆಯ ಪ್ರಕಾರ, ಮಹಾಸುರನ ಸಂಹಾರಕ್ಕಾಗಿ ದುರ್ಗಾದೇವಿಯು ಸಮರಕ್ಕಿಳಿದಾಗ, ಸಕಲ ದೇವಾನುದೇವತೆಗಳು, ಯಕ್ಷ-ಗಂಧರ್ವರು ಹಾಗೂ ಮಾನವ ಸಮುದಾಯಗಳು ತಮ್ಮ ಶಕ್ತಿಗಳನ್ನು ದೇವಿಗೆ ಅರ್ಪಿಸಿ ಮೂಕಪ್ರೇಕ್ಷಕರಾಗಿ ನಿಂತಿದ್ದರು. ಆ ದೈವಿಕ ಸೈನ್ಯ ಮತ್ತು ಸೃಷ್ಟಿಯ ಸಕಲ ಜೀವಜಾಲದ ಸಂಕೇತವಾಗಿಯೇ ಮನೆಯಲ್ಲಿ ಬೆಸ ಸಂಖ್ಯೆಯ (3,5,7,9) ಮೆಟ್ಟಿಲುಗಳನ್ನು ಮಾಡಿ ಗೊಂಬೆಗಳನ್ನು ಜೋಡಿಸಲಾಗುತ್ತದೆ.
  • ಪ್ರಮುಖ ಗೊಂಬೆ ಶೈಲಿಗಳು ಮತ್ತು ಅವುಗಳ ಪ್ರಚಲಿತ ನೆಲೆಗಳು : ಮೈಸೂರು ಹಾಗೂ ಬೆಂಗಳೂರು ಶೈಲಿಯ ಜೇಡಿಮಣ್ಣಿನ ಬೊಂಬೆಗಳು: ಅಪ್ಪಟ ಜೇಡಿಮಣ್ಣಿನಿಂದ ಮಾಡಿ, ಹಸ್ತಕರಕುಶಲತೆಯಿಂದ ಜಳಜಳಿಸುವ ಬಣ್ಣ ಬಳಿದು ಸಿದ್ಧಪಡಿಸುವ ದಶಾವತಾರ, ಅಷ್ಟಲಕ್ಷ್ಮಿ ಹಾಗೂ ಪಟ್ಟದ ಬೊಮ್ಮಾಯಿಗಳು ಈ ಪ್ರದೇಶದಲ್ಲಿ ಅತ್ಯಂತ ಜನಪ್ರಿಯ. ಕಿನ್ನಾಳ ಶೈಲಿಯ ಮರದ ಗೊಂಬೆಗಳು (ಕೊಪ್ಪಳ): ಕೊಪ್ಪಳ ಜಿಲ್ಲೆಯ ಐತಿಹಾಸಿಕ ಕಿನ್ನಾಳ ಗ್ರಾಮದ ಕಲಾಕಾರರು ಹಗುರವಾದ ಮರ ಮತ್ತು ಸಾಂಪ್ರದಾಯಿಕ ಪೇಸ್ಟ್ ಬಳಸಿ ತಯಾರಿಸುವ ಬೊಂಬೆಗಳು ವಿಶ್ವಪ್ರಸಿದ್ಧ. ಇವುಗಳಲ್ಲಿ ಪೌರಾಣಿಕ ದೇವತೆಗಳ ಸೌಂದರ್ಯ ಕಣ್ಣಿಗೆ ಕಟ್ಟುವಂತಿರುತ್ತದೆ. ಚನ್ನಪಟ್ಟಣದ ಬಣ್ಣದ ಮರದ ಗೊಂಬೆಗಳು: ರಾಮನಗರ ಜಿಲ್ಲೆಯ ಚನ್ನಪಟ್ಟಣದ ಲೇಕರ್ ಬಣ್ಣದ ಮರದ ಗೊಂಬೆಗಳು ಈ ಹಬ್ಬಕ್ಕೆ ವಿಶೇಷ ಮೆರುಗು ನೀಡುತ್ತವೆ.
  • ಜಾನಪದ ಹಾಗೂ ಸ್ಥಳೀಯ ಶೈಲಿಗಳು: ಮಲೆನಾಡು, ಕರಾವಳಿ ಮತ್ತು ಉತ್ತರ ಕರ್ನಾಟಕ ಭಾಗಗಳಲ್ಲಿ ಸ್ಥಳೀಯ ಜಾನಪದ ಜೀವನವನ್ನು ಬಿಂಬಿಸುವ ಗೊಂಬೆಗಳು ಹೆಚ್ಚು ಪ್ರಚಲಿತದಲ್ಲಿವೆ.
  • ಸಾಹಿತ್ಯಿಕವಾಗಿ ಹಾಗೂ ಸಂಪ್ರದಾಯದಲ್ಲಿ 'ಬೊಮ್ಮಾಯಿ' ಎಂದರೆ ಮಣ್ಣು, ಮರ ಅಥವಾ ಲೋಹದಿಂದ ಮಾಡಿದ ಕಲಾತ್ಮಕ ಗೊಂಬೆ ಎಂದರ್ಥ. ಈ ಆಚರಣೆಯು ಕೇವಲ ಒಂದು ಗೃಹ ಅಲಂಕಾರವಲ್ಲ; ಇದರಲ್ಲಿ ಪುರಾಣದ ಕಥೆ, ದಾಸರ ಸಾಹಿತ್ಯದ ತತ್ವ, ಮಲೆನಾಡಿನ ವಿಶಿಷ್ಟ ಪರಂಪರೆ ಮತ್ತು ಮಾನವ ಜೀವನದ ದಾರ್ಶನಿಕ ಅರ್ಥ ಅಡಗಿದೆ.
  • ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಬೊಮ್ಮಾಯಿ ಹಬ್ಬವನ್ನು ಆಚರಿಸುವ ಶೈಲಿ ಬೇರೆ ಬೇರೆಯಾದರೂ, ಮಲೆನಾಡಿನ  ಗೊಂಬೆ ಹಬ್ಬಕ್ಕೆ ತನ್ನದೇ ಆದ ವಿಶಿಷ್ಟ ಹಾಗೂ ನೈಸರ್ಗಿಕ ಸೊಗಡಿದೆ:
  • ಮಲೆನಾಡಿನಲ್ಲಿ ಬೊಮ್ಮಾಯಿ ಹಬ್ಬದ ಮೆಟ್ಟಿಲುಗಳನ್ನು ಅಲಂಕರಿಸಲು ಕೇವಲ ಕೃತಕ ವಸ್ತುಗಳನ್ನಲ್ಲದೆ, ಕಾಡಿನ ಹಸಿರು ಪಾಚಿ, ಅಡಿಕೆ ಹಾಳೆಗಳು, ನೈಸರ್ಗಿಕ ಬಿದುರಿನ ಕಡ್ಡಿಗಳು ಹಾಗೂ ಗದ್ದೆಯ ಹಸಿರು ಭತ್ತದ ಮೊಳಕೆಗಳನ್ನು (ಮೊಳಕೆ ಹುಲ್ಲು) ಬಳಸಲಾಗುತ್ತದೆ. ಇದು ಪ್ರಕೃತಿಯೊಂದಿಗೆ ಬೆರೆತ ಹಬ್ಬದ ಸಂಸ್ಕೃತಿಯನ್ನು ಸಾರುತ್ತದೆ.
  • ಮಲೆನಾಡಿನ ಗೊಂಬೆಗಳ ಸಾಲಿನಲ್ಲಿ ಅಡಿಕೆ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು, ಕಾಫಿ ಹಣ್ಣು ಕೀಳುವ ಮಹಿಳೆಯರು, ತಲೆಯ ಮೇಲೆ ಒಣಗಿದ ಗೆರುವೆ/ಸೌದೆ ಹೊತ್ತುಕೊಂಡು ಬರುವ ಗ್ರಾಮೀಣ ಹೆಣ್ಣುಮಕ್ಕಳು ಹಾಗೂ ಮಳೆಯಾಶ್ರಿತ ಬದುಕಿನ ದೃಶ್ಯಗಳನ್ನು ಕಲಾತ್ಮಕವಾಗಿ ಜೋಡಿಸಿರಲಾಗುತ್ತದೆ.
  • ದಾಸರ ಸಾಹಿತ್ಯ ಮತ್ತು ಹರಿದಾಸರ ಗೊಂಬೆಗಳ ಮಹತ್ವ : ಕರ್ನಾಟಕದ ಗೊಂಬೆ ಸಂಪ್ರದಾಯದಲ್ಲಿ ಹರಿದಾಸರು ಮತ್ತು ದಾಸರ ಪರಂಪರೆಗೆ ಅತ್ಯಂತ ಮಹತ್ವದ ಸ್ಥಾನವಿದೆ. ಪುರಂದರದಾಸರು, ಕನಕದಾಸರು ಸೇರಿದಂತೆ ಮುಂತಾದ ಹರಿದಾಸರ ಗೊಂಬೆಗಳನ್ನು, ಅಥವಾ ತಂಬೂರಿ ಹಿಡಿದು ಭಕ್ತಿಗೀತೆಗಳನ್ನು ಹಾಡುವ ದಾಸರ ಮುಖಮುದ್ರೆಯುಳ್ಳ ಗೊಂಬೆಗಳನ್ನು ಮೆಟ್ಟಿಲುಗಳ ಮೇಲೆ ಕೂರಿಸಲಾಗುತ್ತದೆ. "ಬೊಮ್ಮನ ಆಟವಿದು ಬೊಂಬೆಯಾಟವಿದು" ಎಂಬಂತೆ, ಮನುಷ್ಯನ ಜೀವನವೇ ಒಂದು ಬೊಂಬೆಯಾಟ ಎಂಬ ದಾರ್ಶನಿಕ ಸತ್ಯವನ್ನು ದಾಸರ ಪದಗಳು ಸಾರುತ್ತವೆ. ಸೂತ್ರಧಾರನಾದ ದೇವರ ಇಚ್ಛೆಯಂತೆ ಆಡುವ ಬೊಂಬೆಗಳೇ ನಾವು ಎಂಬ ತತ್ವವನ್ನು ದಾಸರ ಗೊಂಬೆಗಳು ನಮಗೆ ನೆನಪಿಸುತ್ತವೆ.
  • ಭಕ್ತಿ ಮತ್ತು ಜ್ಞಾನದ ಸಂಕೇತ: ದಾಸರ ಗೊಂಬೆಗಳು ಕೇವಲ ಅಲಂಕಾರವಲ್ಲ; ಅವು ಭಕ್ತಿ, ಜ್ಞಾನ, ವೈರಾಗ್ಯ ಹಾಗೂ ಸರಳತೆಯ ಪ್ರತೀಕವಾಗಿ ಮನೆಗೆ ಆಧ್ಯಾತ್ಮಿಕ ವಾತಾವರಣವನ್ನು ತರುತ್ತವೆ.
  • ಜಾನಪದ ಗೊಂಬೆಗಳ ಸಾಂಸ್ಕೃತಿಕ ವಿಶ್ಲೇಷಣೆ : ಬೊಮ್ಮಾಯಿ ಹಬ್ಬದಲ್ಲಿ ಬರೀ ದೇವಸ್ಥಾನದ ಮೂರ್ತಿಗಳಷ್ಟೇ ಅಲ್ಲದೆ, ಜಾನಪದ ಗೊಂಬೆಗಳಿಗೆ ಅತ್ಯಂತ ಪ್ರಾಮುಖ್ಯತೆ ನೀಡಲಾಗುತ್ತದೆ. ಮಲೆನಾಡು ಹಾಗೂ ಕರಾವಳಿ ಭಾಗದ ಯಕ್ಷಗಾನ ವೇಷಧಾರಿಗಳು, ಹಾಲಕ್ಕಿ ಸುಗ್ಗಿ ನೃತ್ಯದ ಕಲಾವಿದರು, ಹೊಲದಲ್ಲಿ ಉಳುವ ರೈತ ಹಾಗೂ ಜನಪದ ವಾದ್ಯ ನುಡಿಸುವವರ ಗೊಂಬೆಗಳನ್ನು ಸಾಲಾಗಿ ಕೂರಿಸಲಾಗುತ್ತದೆ.
  • ದೇವಿಯ ದರ್ಬಾರಿನಲ್ಲಿ ಕೇವಲ ರಾಜರು ಅಥವಾ ದೇವತೆಗಳಷ್ಟೇ ಅಲ್ಲ, ಮಣ್ಣಿನ ಮಕ್ಕಳಾದ ರೈತರು, ಶ್ರಮಜೀವಿಗಳು ಮತ್ತು ಜಾನಪದ ಕಲಾವಿದರಿಗೂ ಸಮಾನ ಸ್ಥಾನವಿದೆ ಎಂಬುದನ್ನು ಇದು ತೋರಿಸುತ್ತದೆ.
  • ಈ ಹಳ್ಳಿಯ ಕಲೆ ಹಾಗೂ ಜಾನಪದ ಪರಂಪರೆ ಮುಂದಿನ ಪೀಳಿಗೆಗೆ ತಲುಪಲು ಈ ಗೊಂಬೆ ಪ್ರದರ್ಶನವು ಉತ್ತಮ ಸಾಂಸ್ಕೃತಿಕ ಮಾಧ್ಯಮವಾಗಿದೆ.  ಮೆಟ್ಟಿಲುಗಳ ಮೇಲೆ ಗೊಂಬೆಗಳನ್ನು ಜೋಡಿಸುವ ಶೈಲಿಯ ಹಿಂದೆ ಗಂಭೀರವಾದ ಆಧ್ಯಾತ್ಮಿಕ ಹಾಗೂ ದಾರ್ಶನಿಕ ತತ್ವಅಡಗಿದೆ  ಇದು ಜೀವವಿಕಾಸದ ಸಂಕೇತವಾಗಿದ್ದು  ಕೆಳಗಿನ ಮೆಟ್ಟಿಲುಗಳಲ್ಲಿ ಸಸ್ಯಗಳು, ಪ್ರಾಣಿ-ಪಕ್ಷಿಗಳು, ಜಾನಪದರು ಹಾಗೂ ಮಣ್ಣಿನ ಮಾನವನಿದ್ದರೆ, ಮೇಲಿನ ಮೆಟ್ಟಿಲುಗಳಲ್ಲಿ ದೇವತೆಗಳು ಇರುತ್ತಾರೆ. ಇದು ಪ್ರಕೃತಿಯಿಂದ ದೈವತ್ವದ ಕಡೆಗೆ ಸಾಗುವ ಮಾನವ ಆತ್ಮದ ವಿಕಾಸವನ್ನು ಸೂಚಿಸುತ್ತದೆ.


ನವರಾತ್ರಿ ಬೊಂಬೆ ಹೇಳುತೈತೆ