ಮಲೆನಾಡು • ಸ್ಥಳೀಯ ಸುದ್ದಿ • ಕನ್ನಡದ ಧ್ವನಿ ಪ್ರತಿಬಿಂಬ
ನಮ್ಮ ಊರಿನ ಸುದ್ದಿ — ನಮ್ಮ ಧ್ವನಿ
ತಾಜಾ ಸುದ್ದಿ
ಪ್ರತಿಬಿಂಬಕ್ಕೆ ಸ್ವಾಗತ • ಸ್ಥಳೀಯ ಮತ್ತು ಮಲೆನಾಡಿನ ಸುದ್ದಿಗಳನ್ನು ವೇಗವಾಗಿ ಓದಿ

ಸಭೆ ಬಹಿಷ್ಕರಿಸಿ ಹೊರನಡೆದ ಕೆಡಿಪಿ ಸದಸ್ಯ ಪೂರ್ಣೇಶ್ ಕೆಳಕೆರೆ : ಈ ಹಿಂದೆ ಶಾಸಕರು ವಿಧಾನಸಭೆ ಅಧಿವೇಶನ ನಡೆಯುವಾಗ ವೈಕುಂಠ ಸಮಾರಾಧನೆಗೆ ಹೋಗುತ್ತಾರೆಂದು ಆರೋಪಿಸಿದ್ದ ಕಾಂಗ್ರೆಸ್, ಪೂರ್ಣೇಶ್‌ ಪ್ರಯಾಣ ಎಲ್ಲಿಗಿತ್ತು

ಸಭೆ ಬಹಿಷ್ಕರಿಸಿ ಹೊರನಡೆದ ಕೆಡಿಪಿ ಸದಸ್ಯ ಪೂರ್ಣೇಶ್ ಕೆಳಕೆರೆ : ಈ ಹಿಂದೆ ಶಾಸಕರು ವಿಧಾನಸಭೆ ಅಧಿವೇಶನ ನಡೆಯುವಾಗ ವೈಕುಂಠ ಸಮಾರಾಧನೆಗೆ ಹೋಗುತ್ತಾರೆಂದು ಆರೋಪಿಸಿದ್ದ ಕಾಂಗ್ರೆಸ್, ಪೂರ್ಣೇಶ್‌ ಪ್ರಯಾಣ ಎಲ್ಲಿಗಿತ್ತು
ತೀರ್ಥಹಳ್ಳಿ :  ಕೆಡಿಪಿ ಸಭೆಯ ನಿರ್ಣಯಕ್ಕೆ ಯಾವುದೇ ಬೆಲೆ ಇಲ್ಲ. ಸಭಾ ನಿರ್ಣಯದಂತೆ ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಅಧಿಕಾರಿಗಳೇ ಸಭೆಗೆ ಬರುತ್ತಿಲ್ಲ ಅನುಪಾಲನಾ ವರದಿಯ ಕುರಿತು ಆಕ್ಷೇಪಣೆ ದಾಖಲಾಗುತ್ತಿಲ್ಲ. ನಾವೇಕೆ ಸಭೆಯಲ್ಲಿ ಭಾಗವಹಿಸಬೇಕು ಎಂದು ಕೆಡಿಪಿ ಸದಸ್ಯ ಪೂರ್ಣೇಶ್ ಕೆಳಕೆರೆ ಪ್ರಶ್ನಿಸಿ ಸದಸ್ಯ ಕಾದರ್ಶಿಯಾಗಿರುವ ತಾ. ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿಗಳನ್ನು ಹೊರಗೆ ಕಳಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು. ಈ ನಡುವೆ ಸಭಾಧ್ಯಕ್ಷತೆ ವಹಿಸಿದ್ದ ಆರಗ ಜ್ಞಾನೇಂದ್ರ ಮಧ್ಯೆ ಪ್ರವೇಶಿಸಿ ಇದು ಪ್ರತಿಭಟನೆ  ಅಲ್ಲ,  ಹೀಗೆ ಮಾತನಾಡಿದರೆ ಬೇರೆ ಸದಸ್ಯರಿಗೂ ಅವಕಾಶ ಬೇಕು. ಸಭೆ ಮುಗಿಸಲು ಸಾಧ್ಯವಾಗುವುದಿಲ್ಲ ಎಂದು ಪ್ರತಿಕ್ರಿಸಿದರು. ಇದರಿಂದ ತೃಪ್ತಿಯಾಗದ ಪೂರ್ಣೇಶ್ ಮುಖ್ಯಕಾರ್ಯನಿರ್ವಹಣಾಧಿಕಾರಿಗೆ ಧಿಕ್ಕಾರ ಕೂಗುತ್ತಾ ಸಬೆಯಿಂದ ಹೊರ ನಡೆದಿರುವ ಘಟನೆ ನಡೆದಿದೆ.

ಸಾರ್ವಜನಿಕರ ಧ್ವನಿಯಾಗಿ ಕೆಲಸಮಾಡಬೇಕಿದ್ದ ಕೆಡಿಪಿ ಸದಸ್ಯ ಪೂರ್ಣೇಶ್ ಪ್ರತಿಭಟನೆಯ ಹಾದಿ ತುಳಿಯದೇ ಇದ್ದ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಿತ್ತು. ಸಭೆಯ ಮೂಲ ಉದ್ದೇಶಕ್ಕೆ ಅನುಪಾಲನಾ ವರದಿಯ ಕುರಿತು ಆಕ್ಷೇಪಣೆ ಇದ್ದರೆ ಅದನ್ನು ದಾಖಲಿಸುವ ಅವಕಾಶವನ್ನು ಬಳಸಿಕೊಳ್ಳಬೇಕಿತ್ತು. ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ಈ ವಿಷಯವನ್ನು ತರುವ ಅವಕಾಶವಿತ್ತು. ಸಭೆಯ ಚರ್ಚೆಯೇ ಅಸಮರ್ಥವೆಂದಾಗಿದ್ದಾದಲ್ಲಿ ಅದನ್ನೇ ಒಂದು ಸಾಲಿನ ನಿರ್ಣಯಕ್ಕೆ ಪಟ್ಟುಹಿಡಿಯಬೇಕಿತ್ತು. ಸದಸ್ಯ ಕಾರ್ಯದರ್ಶಿಗೆ ಲಿಖಿತವಾಗಿ ನೀಡಿ ಹಿಂಬರಹ ಪಡೆಯಬಹುದಿತ್ತು. ಇಲ್ಲಾ ಆ ನಕಲನ್ನು ಜಿಲ್ಲಾಧಿಕಾರಿ ಮತ್ತುಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಬಳಿಯಲ್ಲಿ ದೂರು ನೀಡಬಹುದಿತ್ತು. ಇಂತಹ ಸಮಿತಿಗೆ ಸದಸ್ಯರನ್ನು ನೇಮಿಸುವಾಗ ಅರ್ಹರನ್ನೇ ನೇಮಿಸಿರುವಾಗ ಅಂತಹವರಿಗೇ ಅಧಿಕಾರಿಗಳು ದಾರಿ ತಪ್ಪಿಸುವ ಉತ್ತರ ನೀಡಿದರೆ ಅದು ವ್ಯವಸ್ಥೆಯ ಲೋಪಕ್ಕೆ ಹಿಡಿದ ಕನ್ನಡಿಯಾಗುತ್ತದೆ. ಆದ್ದರಿಂದ ಆರ್ ಟಿ ಐ ದಾಖಲೆ ಪಡೆದು ಅದನ್ನು ಲೋಕಾಯುಕ್ತಕ್ಕೆ ದೂರು ನೀಡಲೂ ಅವಕಾಶವಿದೆ. ಸದಸ್ಯರೊಂದಿಗೆ ಚರ್ಚಿಸಿ ಸೂಕ್ತ ಚರ್ಚೆಮೂಲಕ ಎಚ್ಚರಿಸಿ ವ್ಯವಸ್ಥೆಯನ್ನು ಸರಿಪಡಿಸುವ ಬದಲು ಪ್ರತಿಭಟನೆಯ ಹಾದಿ ಹಿಡಿದಿದ್ದು ಹಿನ್ನಡೆಯೇ ಸರಿ ಎಂಬುದು ಬಹುತೇಕರ ಅಭಿಪ್ರಾಯವಾಗಿತ್ತು. ಕೆಲವರು ಶಾಸಕ ಆರಗ ಜ್ಞಾನೇಂದ್ರ ಅಧಿವೇಶನ ನಡೆಯುವಾಗ ಬಿಟ್ಟು ವೈಕುಂಠ ಸಮಾರಾಧನೆಗೆ ಬರುತ್ತಾರೆ ಎಂಬ ಆರೋಪ ಕಾಂಗ್ರೆಸ್‌ ಹೊರಿಸಿತ್ತು ಈಗ ಸಾರ್ವಜನಿಕ ಸಮಸ್ಯೆಗೆ ಧ್ವನಿಯಾಗಬೇಕಾದವರು ಚರ್ಚಿಸದೇ ಪ್ರತಿಭಟನೆ ನಡೆಸಿ ಪ್ರಯಾಣ ಬೆಳೆಸಿದೆಲ್ಲಿಗೆಂಬ ವ್ಯಂಗ್ಯ ಕೆಲವರಿಂದ ಕೇಳಿಬಂದಿದೆ.

ತೈ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜೆಸಿ ಆಸ್ಪತ್ರೆಯಲ್ಲಿ ಲಂಚದ ವಿಚಾರವೂ ಬಿಸಿ ಕಾವು ಏರಿಸಿತ್ತು. ಆಕ್ರೋಶ ಭರಿತರಾದ ಆರಗ ಜ್ಞಾನೇಂದ್ರ ಕನ್ನಂಗಿ ಆಸ್ಪತ್ರೆಯಿಂದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದ 13 ವಾರದ ಗರ್ಭಿಣಿ ಸಾವಿನ ವಿಷಯ ಕುರಿತು ವೈದ್ಯಾಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಕೂಡಲೇ ಮೆಗ್ಗಾನ್ ಆಸ್ಪತ್ರೆಯಿಂದ ಮಾಹಿತಿ ಪಡೆದು  ಸಂಪೂರ್ಣ ಮಾಹಿತಿ ತಿಳಿಸಬೇಕೆಂದರು.

ಜೆಸಿ ಆಸ್ಪತ್ರೆಯಿಂದ ರಕ್ತ ಪರೀಕ್ಷೆ ಇತ್ಯಾದಿಗಳಿಗೆ ಖಾಸಗಿ ಲ್ಯಾಬ್‌ಗೆ ಕಳುಹಿಸುತ್ತಿರುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಗಿದ್ದು ಲ್ಯಾಬ್ ಗಳಲ್ಲಿ 2000 ದಿಂದ 5000 ರದವರೆಗೆ ಹಣ ಪಡೆಯುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂತು. ಅದರಲ್ಲಿ ವೈದ್ಯರಿಗೂ ಪಾಲಿದೆ ಎಂಬ ಮಾಹಿತಿ ಇದೆ. ಇದೆಲ್ಲವನ್ನು ಕೂಡಲೇ ಸರಿಪಡಿಸದೇ ಇದ್ದರೆ ಬೇರೆ ತರವೇ ಆಗುತ್ತದೆ ಎಂದು ಶಾಸಕರು ಎಚ್ಚರಿಸಿದರು. ಓಪಿಡಿಯಲ್ಲೂ ಹಣ ಕೇಳುತ್ತಾರೆ ಎಂಬ ಆರೋಪ ಬಂದಿದೆ. ಡ್ರಿಪ್ ಹಾಕಿದರೆ ನರ್ಸ್ಗಳು 100 ರೂ ಹಣ ಕೇಳುತ್ತಾರೆ. ಇದನ್ನ ಈ ಕೊಡಲೇ ಸರಿಪಡಿಸದೆ ಇದ್ದರೆ ಸರ್ಕಾರಿ ಆಸ್ಪತ್ರೆ ಬದಲು ಅದು ನರ್ಸಿಂಗ್ ಹೋಂ ಆಗಿ ಹೋಗುತ್ತದೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಹಣದ ಅವಶ್ಯಕತೆ ಇದ್ದರೆ ನಾನೇ ಭಿಕ್ಷೆ ಬೇಡಿ ತಂದು ಕೊಡುತ್ತೇನೆ.  ಯಾವುದೇ ವೈದ್ಯರು ಅಥವಾ ನರ್ಸ್ ಹಣ ಕೇಳಿದರೆ ಕೊಡಲೇ ನಮಗೆ ಮಾಹಿತಿ ನೀಡಿ ಎಂದರು. ಹಲವು ಇಲಾಖಾ ಕಾರ್ಯಕ್ರಮಗಳ ಬಗ್ಗೆ ಬಿಸಿ ಚರ್ಚೆ ನಡೆದಿದ್ದು ತಾಲ್ಲೂಕು ಕಛೇರಿಯ ದಾಖಲೆ ವಿಳಂಬದ ಕುರಿತೂ ಆರೋಪಗಳು ಕೇಳಿಬಂದವು.