ಹುಟ್ಟುಹಬ್ಬದಂದು ಸಸಿ ನೆಟ್ಟು ಪರಿಸರ ಕಾಳಜಿ ಮೆರೆದ ಕೆ.ಟಿ. ಚಂದ್ರಪ್ಪ
ತೀರ್ಥಹಳ್ಳಿ: ರೋಟರಿ ಕ್ಲಬ್ ತೀರ್ಥಹಳ್ಳಿಯ ಮಾಜಿ ಅಧ್ಯಕ್ಷ ಹಿರಿಯ ನಾಗರಿಕ ರೊ. ಕೆ.ಟಿ. ಚಂದ್ರಪ್ಪ ಅವರು ತಮ್ಮ ಹುಟ್ಟುಹಬ್ಬವನ್ನು ಪರಿಸರ ಕಾಳಜಿ ಹಾಗೂ ಸರಳ ಸಾಮಾಜಿಕ ಸೇವೆಯೊಂದಿಗೆ ಆಚರಿಸಿಕೊಂಡರು.
ಅಕ್ಟೋಬರ್ 2ರಂದು ರೋಟರಿ ಭವನದ ಆವರಣದಲ್ಲಿ ಸಸಿ ನೆಟ್ಟು, ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಿದರು. ಇದೇ ಸಂದರ್ಭದಲ್ಲಿ ಶಿಶುವಿಹಾರದ ಮಕ್ಕಳಿಗೆ ಸಿಹಿ ವಿತರಿಸಿ ಜನ್ಮದಿನ ಆಚರಿಸಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ರೋಟರಿ ವಲಯ 11ರ ಸಹಾಯಕ ಗವರ್ನರ್ ರೊ. ನಾಗರಾಜ್ ಎಸ್., ಸರಳವಾಗಿ ಹಾಗೂ ಪರಿಸರ ಕಾಳಜಿಯೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿರುವ ಕೆ.ಟಿ. ಚಂದ್ರಪ್ಪ ಅವರ ಕಾರ್ಯವನ್ನು ಮೆಚ್ಚಿ, ಜನ್ಮದಿನದ ಶುಭಾಶಯ ಕೋರಿದರು.
ರೋಟರಿ ಕ್ಲಬ್ ತೀರ್ಥಹಳ್ಳಿ ಅಧ್ಯಕ್ಷ ರೊ. ಎನ್.ಎಚ್. ರಮೇಶ್, ರೊ. ಕೆ.ಪಿ.ಎಸ್. ಸ್ವಾಮಿ, ರೊ. ಭರತ್ ಕುಮಾರ್ ಕೋಡ್ಲು, ಮಾಜಿ ಅಧ್ಯಕ್ಷ ರೊ. ಬಿ.ವಿ. ಶ್ರೀಧರ್, ರೊ. ಮಂಜುನಾಥ್ ಎಂ.ಆರ್., ರೊ. ಎಂ.ಸಿ. ಸಂಜಯ್, ಜೇಸಿ ಅರುಣ್ ಕುಮಾರ್, ರಕ್ತಕೇಂದ್ರದ ತಂತ್ರಜ್ಞ ಅರುಣ್ ಕುಮಾರ್, ಕುಮಾರಿ ಸಿಂಚನ ಹಾಗೂ ಸಾಯಿರಾಭಾನು ಉಪಸ್ಥಿತರಿದ್ದರು.
