ಮಲೆನಾಡು • ಸ್ಥಳೀಯ ಸುದ್ದಿ • ಕನ್ನಡದ ಧ್ವನಿ ಪ್ರತಿಬಿಂಬ
ನಮ್ಮ ಊರಿನ ಸುದ್ದಿ — ನಮ್ಮ ಧ್ವನಿ
ತಾಜಾ ಸುದ್ದಿ
ಪ್ರತಿಬಿಂಬಕ್ಕೆ ಸ್ವಾಗತ • ಸ್ಥಳೀಯ ಮತ್ತು ಮಲೆನಾಡಿನ ಸುದ್ದಿಗಳನ್ನು ವೇಗವಾಗಿ ಓದಿ

ಮಲೆನಾಡಿನ ಕಾಫಿ ಕೃಷಿ — ನಾಟಿಯಿಂದ ಕುಯ್ಲಿನವರೆಗೆ

 


ಮಲೆನಾಡಿನ ಮಣ್ಣಿನೊಂದಿಗೆ ಬೆಸೆದುಕೊಂಡಿರುವ ಪ್ರಮುಖ ಕೃಷಿ ಬೆಳೆಗಳಲ್ಲಿ ಕಾಫಿಗೂ ವಿಶಿಷ್ಟ ಸ್ಥಾನವಿದೆ. ಮಲೆನಾಡಿನ ಹವಾಮಾನ, ಮಣ್ಣು, ಮಳೆ, ನೆರಳು ಮತ್ತು ಪರಿಸರ ಕಾಫಿ ಬೆಳೆಗೆ ಪೂರಕವಾಗಿದ್ದು, ಅನೇಕ ರೈತ ಕುಟುಂಬಗಳ ಬದುಕಿನೊಂದಿಗೆ ಕಾಫಿ ಕೃಷಿ ಅವಿನಾಭಾವ ಸಂಬಂಧ ಹೊಂದಿದೆ.

ಆದರೆ ಕಾಫಿ ಗಿಡ ನಾಟಿ ಮಾಡಿದರೆ ಮಾತ್ರ ಉತ್ತಮ ಫಸಲು ಸಿಗುವುದಿಲ್ಲ. ಸೂಕ್ತ ತಳಿಯ ಆಯ್ಕೆ, ಜಮೀನು ಮತ್ತು ಮಣ್ಣಿನ ಸಿದ್ಧತೆ, ನಾಟಿ ವಿಧಾನ, ನೆರಳಿನ ನಿರ್ವಹಣೆ, ಗೊಬ್ಬರ, ನೀರು, ಕಳೆ ನಿಯಂತ್ರಣ, ರೋಗ–ಕೀಟಗಳ ನಿರ್ವಹಣೆ, ಹೂವು ಮತ್ತು ಕಾಯಿ ಕಟ್ಟುವ ಹಂತ, ಕೊಯ್ಲು ಹಾಗೂ ಕೊಯ್ಲಿನ ನಂತರದ ಸಂಸ್ಕರಣೆ — ಪ್ರತಿಯೊಂದು ಹಂತವೂ ಇಳುವರಿ ಮತ್ತು ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ.

ಮಲೆನಾಡಿನ ರೈತರಿಗೆ ಉಪಯುಕ್ತವಾಗುವಂತೆ ಕಾಫಿ ಕೃಷಿಯ ಸಂಪೂರ್ಣ ಪ್ರಕ್ರಿಯೆಯನ್ನು ನಾಟಿಯಿಂದ ಕುಯ್ಲಿನವರೆಗೆ ಹಲವು ಕಂತುಗಳಲ್ಲಿ ಸರಳವಾಗಿ ತಿಳಿಸುವ ಪ್ರಯತ್ನ ಮಾಡಲಾಗಿದೆ. 

ಈ ಸರಣಿಯಲ್ಲಿ ಕಾಫಿ ತೋಟ ಆರಂಭಿಸುವುದರಿಂದ ಹಿಡಿದು ಗಿಡಗಳ ಆರೈಕೆ, ಪೋಷಕಾಂಶ ನಿರ್ವಹಣೆ, ರೋಗ–ಕೀಟ ನಿಯಂತ್ರಣ, ಇಳುವರಿ ಹೆಚ್ಚಿಸುವ ಕ್ರಮಗಳು ಹಾಗೂ ಕೊಯ್ಲಿನವರೆಗಿನ ಪ್ರಮುಖ ಮಾಹಿತಿಗಳನ್ನು ಹಂತ ಹಂತವಾಗಿ ಪರಿಚಯಿಸಲಾಗುತ್ತದೆ.

ಕಾಫಿ ಬೆಳೆಗಾರರಿಗೆ, ಹೊಸದಾಗಿ ಕಾಫಿ ಕೃಷಿ ಆರಂಭಿಸಲು ಬಯಸುವವರಿಗೆ ಹಾಗೂ ಕಾಫಿ ಕೃಷಿಯ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹೊಂದಿರುವವರಿಗೆ ಈ ಸರಣಿ ಉಪಯುಕ್ತವಾಗಲಿ ಎಂಬುದು ‘ಪ್ರತಿಬಿಂಬ’ದ ಆಶಯ.

ಕಾಫಿ ಕೃಷಿಯ ಮೊದಲ ಹೆಜ್ಜೆಯಿಂದ ಉತ್ತಮ ಫಸಲಿನವರೆಗೆ — ಬನ್ನಿ, ಹಂತ ಹಂತವಾಗಿ  ಮುಂದುವರಿಸೋಣ...