ಮಲೆನಾಡು • ಸ್ಥಳೀಯ ಸುದ್ದಿ • ಕನ್ನಡದ ಧ್ವನಿ ಪ್ರತಿಬಿಂಬ
ನಮ್ಮ ಊರಿನ ಸುದ್ದಿ — ನಮ್ಮ ಧ್ವನಿ
ತಾಜಾ ಸುದ್ದಿ
ಪ್ರತಿಬಿಂಬಕ್ಕೆ ಸ್ವಾಗತ • ಸ್ಥಳೀಯ ಮತ್ತು ಮಲೆನಾಡಿನ ಸುದ್ದಿಗಳನ್ನು ವೇಗವಾಗಿ ಓದಿ

70 ಬಾರಿ ರಕ್ತದಾನ ಮಾಡಿದ ಕೆ.ಪಿ.ಎಸ್. ಸ್ವಾಮಿ, 65ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ಎನ್.ಎಸ್. ಕೃಷ್ಣಮೂರ್ತಿಗೆ ಸನ್ಮಾನ


 


ತೀರ್ಥಹಳ್ಳಿ: ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆಯನ್ನು ರೋಟರಿ ಐಎಂಎ ರಕ್ತಕೇಂದ್ರ, ರೋಟರಿ ಕ್ಲಬ್ ತೀರ್ಥಹಳ್ಳಿ ಹಾಗೂ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ತೀರ್ಥಹಳ್ಳಿ ಘಟಕದ ಸಂಯುಕ್ತ ಆಶ್ರಯದಲ್ಲಿ ಅ.1ರಂದು ರೋಟರಿ ಐಎಂಎ ರಕ್ತಕೇಂದ್ರದಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ನಿರಂತರವಾಗಿ ರಕ್ತದಾನ ಮಾಡುತ್ತಾ, ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಿರುವ ಇಬ್ಬರು ರಕ್ತದಾನಿಗಳನ್ನು ಸನ್ಮಾನಿಸಲಾಯಿತು.

70 ಬಾರಿ ರಕ್ತದಾನ ಮಾಡಿರುವ ರೊ. ಕೆ.ಪಿ.ಎಸ್. ಸ್ವಾಮಿ ಹಾಗೂ 65ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿರುವ ರೊ. ಎನ್.ಎಸ್. ಕೃಷ್ಣಮೂರ್ತಿ (ನೆಲ್ಲಿಸರ) ಅವರನ್ನು ರೋಟರಿ ಐಎಂಎ ರಕ್ತಕೇಂದ್ರದ ಚೇರ್ಮನ್ ರೊ. ಡಾ. ಬಿ.ಜಿ. ನಂದಕಿಶೋರ್ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ತೀರ್ಥಹಳ್ಳಿ ಅಧ್ಯಕ್ಷ ರೊ. ಎನ್.ಎಚ್. ರಮೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸನ್ಮಾನ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ರೊ. ಕೆ.ಪಿ.ಎಸ್. ಸ್ವಾಮಿ, ರಕ್ತಕೇಂದ್ರ ಸ್ಥಾಪನೆಯಾದ ಬಳಿಕ ನಿರಂತರವಾಗಿ ರಕ್ತದಾನ ಮಾಡಲು ಹೆಚ್ಚಿನ ಅನುಕೂಲವಾಗಿದೆ. ರಕ್ತದಾನದ ಮಹತ್ವವನ್ನು ಜನರಿಗೆ ತಿಳಿಸಲು ರಕ್ತಕೇಂದ್ರ ಉತ್ತಮ ವೇದಿಕೆಯಾಗಿದೆ. ತಮ್ಮನ್ನು ಗುರುತಿಸಿ ಸನ್ಮಾನಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ರೊ. ನಾಗರಾಜ್ ಎಸ್., ಸಹಾಯಕ ಗವರ್ನರ್, ವಲಯ 11 ಹಾಗೂ ರೋಟರಿ ಐಎಂಎ ರಕ್ತಕೇಂದ್ರದ ಖಜಾಂಚಿ, ರೊ. ಡಾ. ಯು.ಕೆ. ನಂದಕಿಶೋರ್, ರೋಟರಿ ಜಿಲ್ಲಾ ಚೇರ್ಮನ್, ರಕ್ತಕೇಂದ್ರದ ಪದಾಧಿಕಾರಿಗಳು, ಶ್ರೀ ಅರುಣ್ ಹಾಗೂ ಸ್ವಾಮಿ  ಅವರು ರಕ್ತದಾನ ಮಾಡಿದರು.

ರೊ. ಶಿವಪ್ರಸಾದ್ ಎಂ.ಎಸ್., ಮಾಜಿ ಕಾರ್ಯದರ್ಶಿ, ರೋಟರಿ ಕ್ಲಬ್ ತೀರ್ಥಹಳ್ಳಿ, ರಕ್ತಕೇಂದ್ರದ ತಂತ್ರಜ್ಞರಾದ ಶ್ರೀ ಅರುಣ್ ಕುಮಾರ್, ಶ್ರೀ ಅಭಿಜಿತ್, ಕು. ಸಿಂಚನ ಹಾಗೂ ಶ್ರೀಮತಿ ಸಾಯಿರಾಬಾನು ಉಪಸ್ಥಿತರಿದ್ದರು.

ರೊ. ನಾಗರಾಜ್ ಎಸ್. ಅವರು ಸ್ವಾಗತಿಸಿದರು. ರೊ. ಡಾ. ಯು.ಕೆ. ನಂದಕಿಶೋರ್ ವಂದಿಸಿದರು.