ಮಲೆನಾಡು • ಸ್ಥಳೀಯ ಸುದ್ದಿ • ಕನ್ನಡದ ಧ್ವನಿ ಪ್ರತಿಬಿಂಬ
ನಮ್ಮ ಊರಿನ ಸುದ್ದಿ — ನಮ್ಮ ಧ್ವನಿ
ತಾಜಾ ಸುದ್ದಿ
ಪ್ರತಿಬಿಂಬಕ್ಕೆ ಸ್ವಾಗತ • ಸ್ಥಳೀಯ ಮತ್ತು ಮಲೆನಾಡಿನ ಸುದ್ದಿಗಳನ್ನು ವೇಗವಾಗಿ ಓದಿ

ಅಕ್ಟೋಬರ್ 21 ರಂದು ರಾತ್ರಿ 8ಕ್ಕೆ ತೀರ್ಥಹಳ್ಳಿಯ ನೆಹರೂ ಪಾರ್ಕಿನಲ್ಲಿ ನಡೆಯುವ ಹುಲಿವೇಷದ ಸ್ಪರ್ಧೆಗೆ ಬನ್ನಿ... ಸಂಘಟಕರ ಕರೆಯೋಲೆ

 ಹುಲಿ ಹೆಜ್ಜೆ - ೩ ಆಯೋಜನೆ! 

ಅಕ್ಟೋಬರ್ 21 ರಂದು ರಾತ್ರಿ 8ಕ್ಕೆ ತೀರ್ಥಹಳ್ಳಿಯ ನೆಹರೂ ಪಾರ್ಕಿನಲ್ಲಿ ನಡೆಯುವ ಹುಲಿವೇಷದ ಸ್ಪರ್ಧೆಗೆ ಬನ್ನಿ... 

ಸಂಘಟಕರ ಕರೆಯೋಲೆ

ಅಕ್ಟೋಬರ್‌ 21ಕ್ಕೆ ಕುಶಾವತಿ ನೆಹರೂ ಉದ್ಯಾನವನದಲ್ಲಿ ದಸರಾ ಉತ್ಸವಕ್ಕೆ  ಮೆರಗನ್ನು ನೀಡುವ ಹುಲಿವೇಷ ಸ್ಪರ್ಧೆ ಏರ್ಪಡಿಸಲಾಗಿದೆ.  ಪ್ರಥಮ ಬಹುಮಾನ 50ಸಾವಿರ ರೂ. ದ್ವಿತೀಯ ಬಹುಮಾನ 30ಸಾವಿರ ರೂ. ನಿಗದಿಗೊಳಿಸಿದೆ. ಸ್ಥಳೀಯ ಮಹಿಳಾ ಕಲಾವಿದರಿಗೂ ಹುಲಿಕುಣಿತಕ್ಕೆ ಅವಕಾಶ ಕಲ್ಪಿಸಲಾಗಿದೆ. ವೇಷ ಧರಿಸುವ 15 ಹುಲಿಗಳಿಗೆ ಪ್ರೋತ್ಸಾಹಧನ ನೀಡುತ್ತಿದ್ದು. ಭಾಗವಹಿಸುವ ಪ್ರತಿ ಹುಲಿವೇಷಕ್ಕೂ 10ಸಾವಿರಗಳ ಪ್ರೋತ್ಸಾಹಧನ ನಿಗದಿಗೊಳಿಸಿದೆ ಎಂದು ಸಂಘಟಕರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಪತ್ರಿಕಾ ಗೋಷ್ಠಿಯಲ್ಲಿ‌ ಆರ್.‌ ಮದನ್‌, ಡಿ.ಎಸ್.ವಿಶ್ವನಾಥ ಶೆಟ್ಟಿ, ದಸರಾ ಸಮಿತಿ ಸಂಚಾಲಕ ಸೊಪ್ಪುಗುಡ್ಡೆ ರಾಘವೇಂದ್ರ ಪ್ರಶೋದ್ ಸೇರಿದಂತೆ ಇತರ ಸಂಘಟಕರು ಉಪಸ್ಥಿತರಿದ್ದರು.


ಹುಲಿ ಕುಣಿತ ಹಿನ್ನಲೆ : ಹುಲಿವೇಷದ ಪ್ರಾಕಾರಗಳು : ವಿವಿಧ ಭಂಗಿಗಳು : ತಾಸದ ಶೈಲಿಯ ಕುರಿತು ಮಾಹಿತಿ ಆಸಕ್ತರು ನೋಡಿ......

ಮಲೆನಾಡಿನ ಹುಲಿವೇಷದ ಪ್ರಮುಖ ಪ್ರಕಾರಗಳು

1. **ಬೆಂಕಿ ಹುಲಿ (Fire Tiger):** ಮೈಮೇಲೆ ಕೆಂಪು ಮತ್ತು ಹಳದಿ ಜ್ವಾಲೆಯಂತಹ ಪಟ್ಟೆಗಳನ್ನು ಬಿಡಿಸಿಕೊಂಡು ರೌದ್ರಾವತಾರದಲ್ಲಿ ಕಾಣಿಸಿಕೊಳ್ಳುವ ಹುಲಿ. ಪ್ರದರ್ಶನದ ಕೊನೆಯಲ್ಲಿ ಬಾಯಿಯಿಂದ ಬೆಂಕಿ ಉಗುಳುವುದು (Fire breathing) ಮತ್ತು ಉರಿಯುವ ಸಾಹಸ ಮಾಡುವುದು ಇದರ ಮುಖ್ಯ ಆಕರ್ಷಣೆ.

2. **ರಾಜ ಹುಲಿ (ದೊಡ್ಡ ಹುಲಿ):** ತಂಡದ ಮುಖಂಡನಂತೆ ಭಾರಿ ಮೈಕಟ್ಟಿನಿಂದ ಗಂಭೀರವಾಗಿ ಹೆಜ್ಜೆ ಹಾಕುತ್ತಾ, ಕಠಿಣ ಸಾಹಸಗಳನ್ನು ಪ್ರದರ್ಶಿಸುವ ಪ್ರಮುಖ ಹುಲಿ.

3. **ತಾಯಿ ಹುಲಿ ಮತ್ತು ಮರಿ ಹುಲಿ:** ಸಣ್ಣ ಮಕ್ಕಳಿಗೆ 'ಮರಿ ಹುಲಿ' ವೇಷ ಹಾಕಿ, ತಾಯಿ ಹುಲಿ ತನ್ನ ಮರಿಗೆ ಪ್ರೀತಿ ತೋರಿಸುವ, ಕಾಡಿನಲ್ಲಿ ರಕ್ಷಿಸುವ ಹಾಗೂ ವಿದ್ಯೆ ಕಲಿಸುವ ಸುಂದರ ಜಾನಪದ ಅಭಿನಯ.

4. **ಚಿಟ್ಟೆ ಹುಲಿ (Chita):** ಮೈಮೇಲೆ ಚುಕ್ಕೆ ಪಟ್ಟೆಗಳನ್ನು ಬಿಡಿಸಿಕೊಂಡು, ಚಿರತೆಯಂತೆ ಅತ್ಯಂತ ಚುರುಕಾಗಿ ನೆಗೆಯುವ ವೇಷ.

5. **ಹಿಮ ಹುಲಿ (ಬಿಳಿ ಹುಲಿ):** ಅಪರೂಪದ ಬಿಳಿ ಬಣ್ಣದ ಪಟ್ಟೆಗಳೊಂದಿಗೆ ಶಾಂತ ಮತ್ತು ಸುಂದರ ರೂಪದಲ್ಲಿ ಕಣ್ಣು ಸೆಳೆಯುವ ಹುಲಿ.


ಪ್ರಕೃತಿಯ ನೈಜತೆ ಹಾಗೂ ಹುಲಿಯ ಅಭಿನಯ ಭಂಗಿಗಳು

ಬೇಟೆಯ ಭಂಗಿ: ಪೊದೆಯಲ್ಲಿ ಅಡಗಿ ಕುಳಿತು ಶಬ್ದವಿಲ್ಲದೆ ಹೆಜ್ಜೆ ಇಡುತ್ತಾ ಬೇಟೆಗೆ ಹೊಂಚು ಹಾಕುವುದು.

ವಿಶ್ರಾಂತಿ ಹಾಗೂ ಮೈಮುರಿಯುವ ಭಂಗಿ: ಬಿಸಿಲಿನಲ್ಲಿ ನಿದ್ರಿಸುವುದು, ಮೈ ಕೆರೆದುಕೊಳ್ಳುವುದು ಮತ್ತು ಆಕಳಿಸುವುದು.

ಸೌಮ್ಯ ಹಾಗೂ ಶಾಂತ ಭಂಗಿ: ದೇವತೆಯ ಎದುರು ಅಥವಾ ಮನೆಯ ಜಗಲಿಯ ಬಳಿ ಬಂದಾಗ ತನ್ನ ಕ್ರೂರತೆಯನ್ನು ಬಿಟ್ಟು ಶಾಂತ ಪ್ರಾಣಿಯಂತೆ ನಟಿಸುವುದು.

ರೌದ್ರ ಭಂಗಿ: ಎದುರಾಳಿ ಹುಲಿಯನ್ನು ಕಂಡಾಗ ನೆಗೆದು ಘರ್ಜಿಸುವುದು ಮತ್ತು ಕಾಳಗಕ್ಕೆ ನಿಲ್ಲುವುದು.

ನಗಬೇಡಿ ಹುಲಿ ವೇಷ ಬಂದು ಜಗಲಿಯ ಹುಲ್ಲು ತಿನ್ನುವಂತೆ ನಟಿಸುವ ತಮಾಷೆಯ ಜಾನಪದ ಸನ್ನಿವೇಶವೂ ಇಲ್ಲುಂಟು! ಇದು ಹುಲಿಯ ಸ್ವಯಂ ವೈದ್ಯ ಪದ್ಧತಿಯ ಭಾಗವೂ ಹೌದು.

ತಾಸೆ-ಚಂಡೆಯ ವಾದ್ಯ ಶೈಲಿ ಮಾಹಿತಿಗಳು :

ಹುಲಿವೇಷದ ಅಸಲಿ ತಾಕತ್ತಿನ ಸ್ಪೂರ್ಥಿ ತಾಸೆಯ ಬಡಿತದಲ್ಲಿ. ಇದನ್ನು ಜಾನಪದ ಭಾಷೆಯಲ್ಲಿ **'ಪೆಟ್ಟು'** ಎನ್ನಲಾಗುತ್ತದೆ. ಮಲೆನಾಡಿನಲ್ಲಿ ತಾಸೆಯ ಜೊತೆಗೆ **ಚಂಡೆ ವಾದ್ಯದ** ಬಳಕೆ ಹೆಚ್ಚು.

೩ ಪೆಟ್ಟು (ಮೂರು ಪೆಟ್ಟು):  ಹುಲಿರಾಯ ನಿಧಾನವಾಗಿ ಅಂಗಳಕ್ಕೆ ಪ್ರವೇಶಿಸುವಾಗ, ಹೆಜ್ಜೆ ಹಾಕುವಾಗ ಬಾರಿಸುವ ಸೌಮ್ಯ ಹಾಗೂ ಮೂಲ ಗತಿಯ ಬಡಿತ.

ಸಾಲು ಪೆಟ್ಟು / ನಡೆ ಪೆಟ್ಟು:  ದಾರಿಯಲ್ಲಿ ತಂಡ ಸಾಗುವಾಗ ಬಳಸುವ ಸತತ ತಾಳ.

೧೨ ಪೆಟ್ಟು (ಹನ್ನೆರಡು ಪೆಟ್ಟು) ಪದರಡ್‌ ಪಟ್ಟು ಪಾಡ್ಲೆ ಎನ್ನುವುದು ವಾಡಿಕೆ :  ಇದು ಹುಲಿವೇಷದ ಪರಾಕಾಷ್ಠೆ (Climax Beat)! ಅಖಾಡದಲ್ಲಿ ಹುಲಿ ಬಾಯಿಯಲ್ಲಿ ನಾಣ್ಯ ಕಚ್ಚಿ ಎತ್ತುವಾಗ, ಹಿಮ್ಮುಖವಾಗಿ ಪಲ್ಟಿ (Backflip) ಹೊಡೆಯುವಾಗ, ತೂಕದ ವಸ್ತು/ಕುರಿ ಎತ್ತುವಾಗ ಅಥವಾ ಹುಲಿಗಳ ನಡುವೆ ಸವಾಲು-ಕಾಳಗ ನಡೆಯುವಾಗ ಚಂಡೆ-ತಾಸೆಗಳು '೧೨ ಪೆಟ್ಟಿನ' ಏರು ಗತಿಯಲ್ಲಿ ಬಾರಿಸಲ್ಪಡುತ್ತವೆ. ಈ ಬಡಿತದ ಶಬ್ದ ಕೇಳುತ್ತಿದ್ದಂತೆ ಕಲಾವಿದನಿಗೆ ಮೈಮೇಲೆ ಆವೇಶ ಬಂದಂತೆ ನೃತ್ಯ ರಭಸಗೊಳ್ಳುತ್ತದೆ!

ಶಕ್ತಿ ದೇವತೆಯ ಆರಾಧನೆ ಮತ್ತು ಧಾರ್ಮಿಕ ನಂಬಿಕೆ

ಮಲೆನಾಡಿನಲ್ಲಿ ಹುಲಿವೇಷವೆಂದರೆ ಬರೀ ಬಯಲು ರಂಗಸ್ಥಳದ ಕಲೆಯಲ್ಲ; ಅದೊಂದು ನಂಬಿಕೆ ಮತ್ತು ಹರಕೆಯ ರೂಪವೂ ಆಗಿತ್ತು. ಕೆಲವರಿಗೆ ಹವ್ಯಾಸವೂ ಆಗಿದೆ.

ದೇವಿಯ ವಾಹನ:  ಜಗನ್ಮಾತೆ ದುರ್ಗಾದೇವಿ ಹಾಗೂ ಶಾರದಾಂಬೆಯ ದಿವ್ಯ ವಾಹನವಾದ ಹುಲಿಯನ್ನು ಪ್ರಸನ್ನಗೊಳಿಸಲು ಭಕ್ತರು ಈ ವೇಷ ಧರಿಸುವ ವಾಡಿಕೆ ಇತ್ತು.

ವ್ರತ ಮತ್ತು ಪೂಜೆ:  ನವರಾತ್ರಿಯಿಂದ ದಸರಾದ ತನಕ  ಬಣ್ಣ ಬಳಿಯುವ ಮುನ್ನ ಕಲಾವಿದರು ದೇವಸ್ಥಾನ ಅಥವಾ ಮನೆಯ ದೇವರ ಕೋಣೆಯಲ್ಲಿ ಪೂಜೆ ಸಲ್ಲಿಸಿ, ಹೂವಿನ ಪ್ರಸಾದ ಪಡೆದು ಸಂಕಲ್ಪ ಮಾಡುತ್ತಾರೆ. ಬಣ್ಣದ ಗುಂಗಿನಲ್ಲಿರುವಷ್ಟು ದಿನ ಭಕ್ತಿ-ಶ್ರದ್ಧೆಯ ನಿಯಮಗಳನ್ನು ಪಾಲಿಸುವ ಸಂಕಲ್ಪ ಹೊರುತ್ತಿದ್ದರು.

ಹರಕೆಯ ಸಮರ್ಪಣೆ: ಕಷ್ಟಗಳು ನಿವಾರಣೆಯಾಗಲಿ ಎಂದೋ ಅಥವಾ ಅಂದುಕೊಂಡ ಕಾರ್ಯ ನೆರವೇರಿದ್ದಕ್ಕಾಗಿ ಹರಕೆಯ ರೂಪವಾಗಿ ಯುವಕರು ಮತ್ತು ಮಕ್ಕಳು ಹುಲಿವೇಷ ಧರಿಸಿ ದೇವಿಗೆ ಸಮರ್ಪಿಸುತ್ತಿದ್ದ ವಾಡಿಕೆ ಇತ್ತು.