ಮಲೆನಾಡು • ಸ್ಥಳೀಯ ಸುದ್ದಿ • ಕನ್ನಡದ ಧ್ವನಿ ಪ್ರತಿಬಿಂಬ
ನಮ್ಮ ಊರಿನ ಸುದ್ದಿ — ನಮ್ಮ ಧ್ವನಿ
ತಾಜಾ ಸುದ್ದಿ
ಪ್ರತಿಬಿಂಬಕ್ಕೆ ಸ್ವಾಗತ • ಸ್ಥಳೀಯ ಮತ್ತು ಮಲೆನಾಡಿನ ಸುದ್ದಿಗಳನ್ನು ವೇಗವಾಗಿ ಓದಿ

ಮಲೆನಾಡಿನ ಕಾಫಿ ಕೃಷಿ — ನಾಟಿಯಿಂದ ಕುಯ್ಲಿನವರೆಗೆ - ಭಾಗ 2

ಕಾಫಿ ಬೆಳೆಯುವುದು ಎಂದರೆ ಕೇವಲ ಸಸಿ ನೆಟ್ಟು ನೀರು ಹಾಕುವುದಲ್ಲ. ಭೂಮಿ, ಮಣ್ಣು, ನೆರಳು, ಮಳೆ, ತೇವಾಂಶ ಮತ್ತು ತಾಪಮಾನ—ಇವೆಲ್ಲವೂ ಕಾಫಿಯ ಬೆಳವಣಿಗೆ ಮತ್ತು ಇಳುವರಿಯ ಮೇಲೆ ಪರಿಣಾಮ ಬೀರುತ್ತವೆ.

ಭಾರತದಲ್ಲಿ ಮುಖ್ಯವಾಗಿ ಅರೇಬಿಕಾ ಮತ್ತು ರೋಬಸ್ಟಾ ಎಂಬ ಎರಡು ವಿಧದ ಕಾಫಿಯನ್ನು ಬೆಳೆಯಲಾಗುತ್ತದೆ. Coffee Board ಮಾಹಿತಿಯ ಪ್ರಕಾರ ಅರೇಬಿಕಾಗೆ ತಂಪಾದ ವಾತಾವರಣ ಹೆಚ್ಚು ಸೂಕ್ತವಾಗಿದ್ದರೆ, ರೋಬಸ್ಟಾಗೆ ಬೆಚ್ಚಗಿನ ಮತ್ತು ತೇವಾಂಶವುಳ್ಳ ವಾತಾವರಣ ಸೂಕ್ತವಾಗಿದೆ.


ಕಾಫಿಗೆ ಆಳವಾದ ಮಣ್ಣು,  ಸಾವಯವ ಅಂಶ ಉತ್ತಮವಾಗಿರುವ ಮಣ್ಣು, ನೀರು ಬಸಿದುಹೋಗುವ ವ್ಯವಸ್ಥೆ ಇರುವ ಮಣ್ಣು,  ಸ್ವಲ್ಪ ಆಮ್ಲೀಯ ಸ್ವಭಾವದ ಮಣ್ಣು ಹೆಚ್ಚು ಸೂಕ್ತ.

ಮಲೆನಾಡಿನ ಇಳಿಜಾರು ಪ್ರದೇಶದಲ್ಲಿ ಮತ್ತೊಂದು ಪ್ರಮುಖ ವಿಷಯ ಮಣ್ಣು ಕೊಚ್ಚಿಹೋಗದಂತೆ ಸಂರಕ್ಷಿಸಬೇಕು. ಇಳಿಜಾರು ಜಾಗದಲ್ಲಿ ಮಳೆಯ ನೀರು ನೇರವಾಗಿ ಕೆಳಕ್ಕೆ ಹರಿದರೆ ಮೇಲ್ಮಣ್ಣು ಕೊಚ್ಚಿಕೊಂಡು ಹೋಗುತ್ತದೆ. ಆದ್ದರಿಂದ contour planting, bunding ಅಥವಾ ಅಗತ್ಯವಿರುವ ಕಡೆ terrace ವ್ಯವಸ್ಥೆ ಮಾಡುವುದು ಮುಖ್ಯ.

ಭಾರತೀಯ ಕಾಫಿ ಸಾಮಾನ್ಯವಾಗಿ ನೆರಳಿನಡಿ ಬೆಳೆಯುತ್ತದೆ. Coffee Board ಎರಡು ಹಂತದ shade canopy ವ್ಯವಸ್ಥೆಯನ್ನು ಶಿಫಾರಸು ಮಾಡುತ್ತದೆ. ನೆರಳು ಮಣ್ಣಿನ ತೇವಾಂಶ ಮತ್ತು ತಾಪಮಾನದಲ್ಲಿನ ಏರಿಳಿತವನ್ನು ನಿಯಂತ್ರಿಸಲು ಇವು ಸಹಾಯ ಮಾಡುತ್ತದೆ.

ಕಾಫಿ ಬೆಳಿಗೆ ಮಲೆನಾಡಿನ ತೇವಾಂಶ, ಮಳೆ, ನೆರಳು ಮತ್ತು ಎತ್ತರ ಇರುವ ಪ್ರದೇಶಗಳಿಗೆ ಕಾಫಿ ತಳಿ ಆಯ್ಕೆ ಮಾಡುವಾಗ “ಹೆಚ್ಚು ಇಳುವರಿ”ಗಿಂತ ರೋಗನಿರೋಧಕತೆ + ಮಣ್ಣಿನ ಹೊಂದಾಣಿಕೆ + ಮಾರುಕಟ್ಟೆ ಗುಣಮಟ್ಟ ಮುಖ್ಯ.

Coffee Board ಮಾಹಿತಿಯ ಪ್ರಕಾರ ಕರ್ನಾಟಕದ ಮಲೆನಾಡು ಪ್ರದೇಶಗಳಲ್ಲಿ Arabica ಮತ್ತು Robusta ಎರಡನ್ನೂ ಬೆಳೆಯಲಾಗುತ್ತದೆ. Arabica ಸಾಮಾನ್ಯವಾಗಿ ತಂಪಾದ 15–25°C ವಾತಾವರಣ ಮತ್ತು 1,000–1,500 ಮೀ. ಎತ್ತರಕ್ಕೆ ಹೆಚ್ಚು ಸೂಕ್ತ; Robusta ಬಿಸಿಯಾದ, ತೇವಾಂಶದ 20–30°C ವಾತಾವರಣಕ್ಕೆ ಸೂಕ್ತ ಎಂದು ಪರಿಗಣಿಸಿದೆ.

🌱 ಮಲೆನಾಡಿಗೆ ಪರಿಗಣಿಸಬಹುದಾದ ಪ್ರಮುಖ ತಳಿಗಳು

1. Chandragiri ಚಂದ್ರಗಿರಿ

Coffee Board ಪ್ರಕಾರ Chandragiri ಅನ್ನು 2007ರಲ್ಲಿ ಬಿಡುಗಡೆ ಮಾಡಲಾಗಿದ್ದು, ತಿಳಿದಿರುವ coffee leaf-rust races‌ಗಳಿಗೆ ಉತ್ತಮ ಸಹಿಷ್ಣುತೆ ಮತ್ತು ಹೆಚ್ಚಿನ ಇಳುವರಿ ನೀಡುವ ಗುಣ ಹೊಂದಿದೆ. A-grade beans ಪ್ರಮಾಣವೂ 80%ಕ್ಕಿಂತ ಹೆಚ್ಚು ಎಂದು Coffee Board ದಾಖಲಿಸಿದೆ.

ಇನ್ನೊಂದು ಕೃಷಿ ಮೂಲದಲ್ಲಿ Chandragiri ದೊಡ್ಡ ಗಾತ್ರದ ಹಣ್ಣು, ಬರ ಸಹಿಷ್ಣುತೆ ಮತ್ತು ಇತರ Arabicaಗಳಿಗಿಂತ ಕಡಿಮೆ leaf-rust incidence ಹೊಂದಿರುವುದಾಗಿ ವಿವರಿಸಲಾಗಿದೆ. ಸುಮಾರು 915 ಮೀ. (3,000 ಅಡಿ) ಅಥವಾ ಅದಕ್ಕಿಂತ ಹೆಚ್ಚಿನ ಎತ್ತರದಲ್ಲಿ ನೆಡುವುದು ಸೂಕ್ತ ಎಂದು KAU ಮಾರ್ಗದರ್ಶನ ನೀಡುತ್ತದೆ.

ಸಾಧಕ

  • ಮಲೆನಾಡಿನ ಕೆಲವು ಎತ್ತರ ಪ್ರದೇಶಗಳಿಗೆ ಸೂಕ್ತ

  • Leaf rust ವಿರುದ್ಧ ಉತ್ತಮ ಸಹಿಷ್ಣುತೆ

  • ದೊಡ್ಡ ಹಣ್ಣು

  • ಬರದ ಒತ್ತಡವನ್ನು ಕೆಲವು ಮಟ್ಟಿಗೆ ಸಹಿಸಬಲ್ಲದು

  • ಉತ್ತಮ ಗುಣಮಟ್ಟದ Arabica ಉತ್ಪಾದನೆಗೆ ಅವಕಾಶ

ಬಾಧಕ

  • ತುಂಬಾ ಕಡಿಮೆ ಎತ್ತರ/ಹೆಚ್ಚು ಬಿಸಿಯಾದ ಪ್ರದೇಶದಲ್ಲಿ ಸೂಕ್ತವಾಗದೇ ಇರಬಹುದು

  • shade ಮತ್ತು ಪೋಷಕಾಂಶ ನಿರ್ವಹಣೆ ಅಗತ್ಯ

2. SLN 9 — ಗುಣಮಟ್ಟಕ್ಕೆ ಒತ್ತು ನೀಡುವವರಿಗೆ

SLN 9 ಅನ್ನು Ethiopian Arabica collection ‘Tafarikela’ ಮತ್ತು Hybrido-de-Timor ಸಂಕರದಿಂದ ಅಭಿವೃದ್ಧಿಪಡಿಸಲಾಗಿದೆ. Coffee Board ಪ್ರಕಾರ ಇದು ಉತ್ತಮ cup-quality ಗುಣಗಳನ್ನು ಪಡೆದಿದ್ದು, 2002ರ Flavour of India cupping competitionನಲ್ಲಿ Fine Cup Award ಪಡೆದಿತ್ತು. 

ಸಾಧಕ

  • ಉತ್ತಮ ಕಾಫಿ ಗುಣಮಟ್ಟ

  • ಮಾರುಕಟ್ಟೆಯಲ್ಲಿ specialty coffeeಗೆ ಅವಕಾಶ

  • ಕೆಲವು ರೋಗಗಳಿಗೆ ಸಹಿಷ್ಣುತೆ

ಬಾಧಕ

  • Arabica ಆಗಿರುವುದರಿಂದ ರೋಗ-ಕೀಟ ನಿರ್ವಹಣೆ ಕಡೆಗಣಿಸಲು ಸಾಧ್ಯವಿಲ್ಲ

  • ಅತಿಯಾದ ತೇವಾಂಶ ಮತ್ತು ಕಳಪೆ ಗಾಳಿ ಸಂಚಾರವಿರುವ ತೋಟದಲ್ಲಿ ನಿರ್ವಹಣೆ ಮುಖ್ಯ

ಕಾಫಿಯನ್ನು ಕೇವಲ commodity ಆಗಿ ಮಾರದೆ ಉತ್ತಮ ಗುಣಮಟ್ಟದ coffee bean ಉತ್ಪಾದಿಸಲು ಬಯಸುವವರು ಪರಿಗಣಿಸಬಹುದಾಗಿದೆ.


3. Cauvery / Catimor — ಹೆಚ್ಚು ಪ್ರಾಯೋಗಿಕ ಆಯ್ಕೆ

Cauvery ಅನ್ನು ಸಾಮಾನ್ಯವಾಗಿ Catimor ಎಂದು ಕರೆಯಲಾಗುತ್ತದೆ. ಇದು Caturra × Hybrido-de-Timor ಮೂಲದ ತಳಿ. Coffee Board ಪ್ರಕಾರ Caturraಯ high-yield ಗುಣ ಮತ್ತು Hybrido-de-Timorನ resistance ಗುಣಗಳು ಇದರಲ್ಲಿ ಸೇರಿವೆ

ಸಾಧಕ

  • ಉತ್ತಮ ಇಳುವರಿ ಸಾಮರ್ಥ್ಯ

  • ಗಿಡದ ಗಾತ್ರ ತುಸು compact

  • ಹೆಚ್ಚು densityಯಲ್ಲಿ ನೆಡುವ ವ್ಯವಸ್ಥೆಗೆ ಅನುಕೂಲ

  • ರೋಗದ ಒತ್ತಡ ಇರುವ ಪ್ರದೇಶದಲ್ಲಿ ಉಪಯುಕ್ತ

ಬಾಧಕ

  • ಅತ್ಯುತ್ತಮ specialty cup ಬೇಕಾದರೆ SLN 9 ಮುಂತಾದವುಗಳೊಂದಿಗೆ ಗುಣಮಟ್ಟ ಹೋಲಿಕೆ ಮಾಡಬೇಕು

  • ಹೆಚ್ಚು ಉತ್ಪಾದನೆ ಪಡೆಯಲು ಪೋಷಕಾಂಶ ನಿರ್ವಹಣೆ ಮುಖ್ಯ


4. SLN 795 — ಹಳೆಯದಾದರೂ ಇನ್ನೂ ಪ್ರಮುಖ ತಳಿ

“ಹೊಸ ತಳಿ” ಅಲ್ಲದಿದ್ದರೂ SLN 795 ಅನ್ನು ನಿರ್ಲಕ್ಷಿಸುವುದು ಸರಿಯಲ್ಲ.

Coffee Board ಪ್ರಕಾರ ಇದು 1940ರ ದಶಕದಲ್ಲಿ ಬಿಡುಗಡೆಯಾದ ಪ್ರಮುಖ Arabica selection; ಹೆಚ್ಚಿನ ಇಳುವರಿ, ದೊಡ್ಡ ಬೀಜ, ಉತ್ತಮ ಗುಣಮಟ್ಟ ಮತ್ತು leaf-rustಗೆ relative tolerance ಹೊಂದಿದೆ.

ಮುಖ್ಯ ಅನುಕೂಲ:
ಮಲೆನಾಡಿನ ಸ್ಥಾಪಿತ coffee-growing ಪ್ರದೇಶಗಳಲ್ಲಿ ದೀರ್ಘಕಾಲದಿಂದ ಪರೀಕ್ಷಿಸಲ್ಪಟ್ಟಿರುವ ತಳಿ ಇದಾಗಿದೆ.


5. Robusta — ತೀರ್ಥಹಳ್ಳಿಯ ಕಡಿಮೆ ಎತ್ತರ/ಹೆಚ್ಚು ತೇವ ಪ್ರದೇಶಕ್ಕೆ ಪರಿಗಣಿಸಬಹುದು

ತೋಟದ ಪ್ರದೇಶ ಕಡಿಮೆ ಎತ್ತರ, ಹೆಚ್ಚು ಬಿಸಿ ಮತ್ತು ತೇವಾಂಶ ಇರುವ ಪ್ರದೇಶ ಆಗಿದ್ದರೆ Arabica ಬದಲು Robusta ಪರಿಗಣಿಸುವುದು ಸೂಕ್ತ.

Coffee Board ಪ್ರಕಾರ Robustaಗೆ 20–30°C ತಾಪಮಾನ ಮತ್ತು ಬಿಸಿ-ತೇವ ಪರಿಸ್ಥಿತಿ ಹೆಚ್ಚು ಸೂಕ್ತ. Arabicaಗೆ ಹೋಲಿಸಿದರೆ Robusta ಸಾಮಾನ್ಯವಾಗಿ ಕೆಲವು ಕೀಟ/ರೋಗ ಒತ್ತಡಗಳನ್ನು ಉತ್ತಮವಾಗಿ ಸಹಿಸಬಲ್ಲದು. 

ಕರ್ನಾಟಕದಲ್ಲಿ ಪ್ರಮುಖ Robusta selectionsಗಳಲ್ಲಿ S.274 ಮತ್ತು CxR ಸೇರಿವೆ. 


ಇದು ಅಂತಿಮ “ಒಂದೇ ತಳಿ ಎಲ್ಲೆಡೆ” ಶಿಫಾರಸು ಅಲ್ಲ. ನಿಮ್ಮ ನಿಖರ ಎತ್ತರ, ಮಣ್ಣಿನ drainage, ವಾರ್ಷಿಕ ಮಳೆ ಮತ್ತು ನೆರಳಿನ ಪ್ರಮಾಣದಿಂದ ಆಯ್ಕೆ ಬದಲಾಗುತ್ತದೆ.