ಮಾಹಿತಿಗಾಗಿ ಸಂಪರ್ಕಿಸಿ : 9980258400- 9448215797
ಈ ಸಂದರ್ಭ ತಾವು ಗ್ರಾ.ಪಂ. ಅಧ್ಯಕ್ಷರಾಗಿದ್ದ ಸಂದರ್ಭ ನಡೆದ ಒಂದು ಘಟನೆಯನ್ನು ವಿವರಿಸಿ ಗ್ರಾಮೀಣ ಭಾಗದ ಜನರ ಆರೋಗ್ಯ ನಿರ್ಲಕ್ಷ ಮತ್ತು ತಿಳಿವಳಿಕೆಯ ಕೊರತೆಯನ್ನು ಹಂಚಿಕೊ0ಡಿದ್ದಾರೆ.
ಬೆಳಿಗ್ಗೆ ಎಂದನ0ತೆ ತೋಟಕ್ಕೆ ಹೊರಟ ಸಂದರ್ಭ. ಒಂದು ಬಡಕುಟುಂಬದ ಮನೆ ಮುಂದೆ ಬಹಳಷ್ಟು ಜನ ಸೇರಿದ್ದಾರೆ. ಕೆಲವರು ಅಳುತ್ತಿದ್ದಾರೆ. ಕೆಲವರು ಸತ್ತ ಹೋಗಿದ್ದಾರೆ ಎಂಬ ಮಾಹಿತಿ ನೀಡಲು ಫೋನಿನಲ್ಲಿ ಕಾರ್ಯನಿರತರಾಗಿದ್ದಾರೆ. ಒಳಗೆ ಹೋಗಿ ನೋಡಿದರೆ ಇನ್ನೂ ಉಸಿರಾಡುತ್ತಿದ್ದಾರೆ. ಕೂಡಲೇ ಅವರನ್ನು ಕಾರಿನಲ್ಲಿ ತಂದು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಪರೀಕ್ಷಿಸಿ ಯಾವುದಾದರೂ ತಪಾಸಣೆ ರಿಪೋರ್ಟ್ ಇದೆಯಾ ಎಂದು ಕೇಳಿದರು. ಇಲ್ಲ ಎಂದು ಅವರ ಕಡೆಯವರು ಉತ್ತರಿಸಿದರು. ವೈದ್ಯರು ಸಕ್ಕರೆ ಅಂಶವನ್ನು ರೋಗಿಗೆ ಹಾಕಿದರು. ಕೆಲವೇ ಕ್ಷಣದಲ್ಲಿ ಎಚ್ಚರಗೊಂಡ ವ್ಯಕ್ತಿ ನಾನೆಲ್ಲಿದ್ದೇನೆ- ನನಗೇನಾಗಿದೆ ಎಂದು ಉತ್ತರಿಸಿದ. ಸಣ್ಣ ನಿರ್ಲಕ್ಷ ಚಟ್ಟಕ್ಕೇರಿಸುವ ಹಂತಕ್ಕೆ ತಲುಪಿತ್ತು. ಆರೋಗ್ಯದ ಕುರಿತು ನಿರ್ಲಕ್ಷö್ಯ ಸಲ್ಲ. ಇದು ಉಚಿತ ಆರೋಗ್ಯ ತಪಾಸಣಾ ಶಿಬಿರವಾಗಿದ್ದು ತಜ್ಞ ವೈದ್ಯರೇ ಆಗಮಿಸಲಿದ್ದಾರೆ. ಅಗತ್ಯವಿರುವವರು ಪ್ರಯೋಜನ ಪಡೆದುಕೊಳ್ಳಿ ಎಂದರು.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆದರ್ಶ ಆಸ್ಪತ್ರೆಯ ಡಿಯಾಗೋ ಕ್ವಾಡ್ರಸ್ ಮಾತನಾಡಿ ತಂತ್ರಜ್ಞಾನ ಸಾಕಷ್ಟು ಮುಂದುವರೆದಿದ್ದರು ಆರೋಗ್ಯ ಸೇವೆ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಬಡವರಿಗೆ ಲಭ್ಯವಾಗುತ್ತಿಲ್ಲ. ಮಧುಮೇಹ ಮತ್ತು ಏರು ರಕ್ತದೊತ್ತಡದಂತಹ ಕಾಯಿಲೆಯ ತಪಾಸಣೆ ಕೂಡ ಎಲ್ಲರಿಗೂ ದೊರಕುತ್ತಿಲ್ಲ ಅಗತ್ಯವುಳ್ಳವರು ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು. ಜನರಿಗೆ ಆರೋಗ್ಯದ ಕಾಳಜಿ ಕುರಿತಾದ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಜ್ಯದ ನಾನಾಭಾಗಗಳಲ್ಲಿ ಆರೋಗ್ಯ ಶಿಬಿರವನ್ನು ಆದರ್ಶ ಆಸ್ಪತ್ರೆ ಹಮ್ಮಿಕೊಳ್ಳುತ್ತಿದೆ.
ಈ ಶಿಬಿರದಲ್ಲಿ ಹಿರಿಯ ವೈದ್ಯಕೀಯ ತಜ್ಞರಾದ ಡಾ.ಚಂದ್ರಶೇಖರ್, ಡಾ.ಉದಯ ಕುಮಾರ್ ಪ್ರಭು, ಡಾ.ಸುದೀಪ್ ಶೆಟ್ಟಿ, ಮೂಳೆ ಕೀಲು ರೋಗ ತಜ್ಞ ಡಾ.ಮೋಹನ್ ದಾಸ್ ಶೆಟ್ಟಿ, ಶಸ್ತçಚಿಕಿತ್ಸಾ ವಿಭಾಗದ ಡಾ. ಪ್ರಶಾಂತ್ ಶೆಟ್ಟಿ, ಕಿವಿಮೂಗು ಗಂಟಲು ವಿಭಾಗದ ಡಾ. ಭಾಸ್ಕರ್ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ರಂಜಿತಾನಾಯಕ್, ನರರೋಗ ಶಸ್ತ್ರಚಿಕಿತ್ಸಾ ತಜ್ಞ ಡಾ.ವಿನೋದ್, ಹೃದ್ರೋಗ ತಜ್ಞ ಡಾ.ಸುಹಾಸ್, ನವಜಾತ ಶಿಶು ಮಕ್ಕಳ ವಿಭಾಗದ ಡಾ. ಗುರುಪ್ರಸಾದ್ ಶೆಟ್ಟಿ, ತೆರೆದ ಹೃದಯ ಮತ್ತು ರಕ್ತನಾಳ ಶಸ್ತçಚಿಕಿತ್ಸಾ ವಿಭಾಗದ ಡಾ. ಗುರುಪ್ರಸಾದ್ ವಿ.ರೈ. ನೇತ್ರ ವಿಭಾಗದ ಡಾ. ಮಾನಸ ಎಂ. ಭಟ್, ಚರ್ಮರೋಗ ವಿಭಾಗದ ಡಾ. ಅರುಣ್ ಶೆಟ್ಟಿ ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಆಸ್ಪತ್ರೆಯ ರೋವಿಯನ್ ಡಿಸೋಜ, ಸಂತೋಷ್ ಶೆಟ್ಟಿ, ಯುವಕ ಸಂಘದ ಕಾರ್ಯದರ್ಶಿ ಕುರುವಳ್ಳಿ ನಾಗರಾಜ್, ಗೌರವಾಧ್ಯಕ್ಷ ಬಿ.ಎನ್.ಗುರುರಾಜ್, ಪ್ರಮೋದ್ ಪೂಜಾರಿ ಇನ್ನಿತರರು ಉಪಸ್ಥಿತರಿದ್ದರು.
