ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇವರು ನಾಳೆ ಸೆ.19 ಬೆಳಿಗ್ಗೆ 10ಕ್ಕೆ ಇಲ್ಲಿನ ಸರ್ಕಾರಿ ಪದವಿ ಕಾಲೇಜಿನಲ್ಲಿ 50ಜನ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ. ನಂತರ ಜ್ಯೂನಿಯರ್ ಕಾಲೇಜು ಆವರಣದ ಮೈದಾನದಲ್ಲಿ ಬಹಿರಂಗ ಸಭೆ ನಡೆಯಲಿದೆ. ಅಂದು ಮುಖ್ಯಮಂತ್ರಿಗಳೊ0ದಿಗೆ ಉಪಮುಖ್ಯಮಂತ್ರಿ ಪರಮೇಶ್ವರ್, ಅರಣ್ಯ ಮತ್ತು ಪರಿಸರ ಇಲಾಖೆಯ ಸಚಿವ ರಾಮಲಿಂಗಾರೆಡ್ಡಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಪಾಲ್ಗೊಳ್ಳಲಿದ್ದಾರೆ. ಎಲ್ಲರಿಗೂ ಅವಕಾಶ ನೀಡಿದರೆ ಸಮಯಾವಕಾಶ ಅಭಾವ ಸೃಷ್ಟಿಯಾಗುವುದರಿಂದ ತಮ್ಮ ಹೇಳಿಕೆಯನ್ನು ಲಿಖಿತರೂಪದಲ್ಲಿ ಸಲ್ಲಿಸಲು ಎಲ್ಲರಿಗೂ ಅವಕಾಶವಿದೆ ಮುಖ್ಯಮಂತ್ರಿಗಳು ಅದನ್ನೂ ಪರಿಗಣಿಸುತ್ತಾರೆ.
ಕಸ್ತೂರಿ ರಂಗನ್ ವರದಿಯಿಂದ ಬಾಧಿತವಾಗುವ ಜಿಲ್ಲೆಗಳಿಗೆ ಮುಖ್ಯಮಂತ್ರಿಗಳು ಭೇಟಿನೀಡಿ ಜನರ ಸಮಸ್ಯೆಯನ್ನು ನೇರವಾಗಿ ಆಲಿಸುತ್ತಿದ್ದಾರೆ. ವಿಶೇಷ ಅಧಿವೇಶನವನ್ನೂ ಕರೆದಿದ್ದಾರೆ. ಅವರ ಈ ಕಾಳಜಿಗಾಗಿ ಅಭಿನಂದಿಸುತ್ತೇನೆ.
ಹವಾಮಾನ ವೈಪರೀತ್ಯದ ಕುರಿತಾಗಿ ಈ ವರದಿಯನ್ನು ಅನುಷ್ಠಾನಕ್ಕೆ ತರಲು ಅಧಿಸೂಚನೆ ಹೊರಡಿಸಲಾಗಿದೆ. ಸೆಟಲೈಟ್ ಮೂಲಕ ಮಾಡಿದ ಈ ಸರ್ವೆ ಒಪ್ಪಿಕೊಂಡರೆ ಜನರ ಬದುಕು ತೊಂದರೆಗೊಳಗಾಗುತ್ತದೆ. ಗ್ರಾಮದಲ್ಲಿ ವಸ್ತುಸ್ಥಿತಿ ಅಧ್ಯಯನ ಮಾಡಿ ವರದಿ ನೀಡಬೇಕು. ಕಸ್ತೂರಿ ರಂಗನ್‌ವರದಿಯ ಅನುಷ್ಠಾನಕ್ಕೆ ವಿರೋಧವನ್ನು ಗಟ್ಟಿ ಧ್ವನಿಯಲ್ಲಿ ದಾಖಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಇದೊಂದು ಸರ್ಕಾರಿ ಕಾರ್ಯಕ್ರಮ ಎಲ್ಲೂ ಆಗಮಿಸಬೇಕೆಂದು ಕರೆನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷ ಕೆಸ್ತೂರು ಮಂಜುನಾಥ್, ಮುಖಂಡರಾದ ಸುಂದರೇಶ್, ರಾಘವೇಂದ್ರ ಶೆಟ್ಟಿ, ಅಮರನಾಥಶೆಟ್ಟಿ, ಬಾಳೇಹಳ್ಳಿ ಪ್ರಭಾಕರ್, ಆದರ್ಶ ಹುಂಚದಕಟ್ಟೆ ಪ.ಪಂ. ಅಧ್ಯಕ್ಷ ರತ್ನಾಕರ ಶೆಟ್ಟಿ ಉಪಾಧ್ಯಕ್ಷೆ ಗೀತಾ ರಮೇಶ್, ಮುಂತಾದವರಿದ್ದರು.
.jpg)