ಮಲೆನಾಡು • ಸ್ಥಳೀಯ ಸುದ್ದಿ • ಕನ್ನಡದ ಧ್ವನಿ ಪ್ರತಿಬಿಂಬ
ನಮ್ಮ ಊರಿನ ಸುದ್ದಿ — ನಮ್ಮ ಧ್ವನಿ
ತಾಜಾ ಸುದ್ದಿ
ಪ್ರತಿಬಿಂಬಕ್ಕೆ ಸ್ವಾಗತ • ಸ್ಥಳೀಯ ಮತ್ತು ಮಲೆನಾಡಿನ ಸುದ್ದಿಗಳನ್ನು ವೇಗವಾಗಿ ಓದಿ

ಉದ್ದೇಶಪೂರ್ವಕ ಸುಸ್ತಿದಾರರ ಆರೋಪಗಳಿಗೆ ಹುರುಳಿಲ್ಲ - ಹೆಚ್. ಎನ್. ವಿಜಯದೇವ್


ತೀರ್ಥಹಳ್ಳಿ : ಉದ್ದೇಶಪೂರ್ವಕ ಸುಸ್ತಿದಾರರ ಆರೋಪಗಳಲ್ಲಿ ಹುರುಳಿಲ್ಲ. ಠೇವಣಿ ಇಟ್ಟವರು ಪ್ರಾಮಾಣಿಕವಾಗಿ ವ್ಯವಹರಿಸುವ ಎಲ್ಲ ಸದಸ್ಯರು ಸೇರಿದಂತೆ ಉದ್ದೇಶಪೂರ್ವಕ ಸುಸ್ತಿದಾರರಲ್ಲದ ಸುಸ್ತಿದಾರರೂ ಸಂಸ್ಥೆಯ ಬಗ್ಗೆ ಯಾವುದೇ ಆರೋಪಗಳನ್ನು ಹೊರಿಸುತ್ತಿಲ್ಲ. ಸಂಸ್ಥೆಯ ಠೇವಣಿ ಸಾಲ ಲಾಭ ಸೇರಿದಂತೆ ಸಂಸ್ಥೆಯ ವ್ಯವಹಾರಗಳೆಲ್ಲವೂ ಹೆಚ್ಚಾಗಿವೆ. ಈ ಮೂಲಕ ಷೇರುದಾರರೇ ಉತ್ತರನೀಡಿದ್ದಾರೆ ಎಂದು ಹೆಚ್. ಎನ್. ವಿಜಯದೇವ್ ಹೇಳಿದರು. ಸಹ್ಯಾದ್ರಿ ಸಮೂಹ ಸಂಸ್ಥೆಗಳ ಮಹಾಸಭೆಯಲ್ಲಿ ಮಾತನಾಡಿದ ಇವರು ಸಂಸ್ಥೆಯಲ್ಲಿ ಠೇವಣಿ ಇರಿಸಿದವರಿಗೆ, ಚೀಟಿನಿಧಿ ಹೂಡಿಕೆ ಮಾಡಿಕೆದವರಿಗೆ ಯಾವುದೇ ಸಮಸ್ಯೆ ಉದ್ಭವವಾಗುವುದಿಲ್ಲ. ಸಂಸ್ಥೆಯು ಠೇವಣಿಗಿಂತ ಹತ್ತಾರು ಪಟ್ಟು ಹೆಚ್ಚು ಮೌಲ್ಯದ ಆಸ್ತಿ ಹೊಂದಿದೆ. ಉದ್ದೇಶಪೂರ್ವಕ ಸುಸ್ತಿದಾರರ ಸಾಲ ವಸೂಲಿ ಕಾನೂನು ಪ್ರಕ್ರಿಯೆಮೂಲಕ ಆಗುತ್ತದೆಂದರು. ಸದಸ್ಯರಿಂದ ಬಂದ ಲಿಖಿತ ಪ್ರಶ್ನೆ ವಿಚಾರದಲ್ಲಿ ಸದಸ್ಯರೋರ್ವರು ಚೀಟಿ ನಿಧಿ ಕಮಿಷನ್ ಕಡಿಮೆ ಮಾಡುವ ಕುರಿತು ಪ್ರಸ್ತಾವನೆ ಸಲ್ಲಿಸಿದ್ದು ಯೂನಿಯನ್ ಮತ್ತು ಚಿಟ್‌ಫಂಡ್ ರಿಜಿಸ್ಟಾರ್ ನಿಯಮಗಳಂತೆ ಕಾರ್ಯನಿರ್ವಹಿಸುತ್ತಿದೆ. ಕಡಿಮೆ ಮಾಡಲು ಅವಕಾಶವಿಲ್ಲ ಎಂದರು.

ಶರಾವತಿ ಪತ್ತಿನ ಸಹಕಾರ ಸಂಘದ ಅಜಿತ್ ಮಾತನಾಡಿ ಭಾರತದಲ್ಲಿ ಸರ್ಕಾರಿ, ಖಾಸಗಿ ಕ್ಷೇತ್ರಗಳಂತೆಯೇ ಮೂರನೇ ಆರ್ಥಿಕ ಶಕ್ತಿಯಾಗಿ ಸಹಕಾರಿ ಕ್ಷೇತ್ರ ಬೆಳೆಯುತ್ತಿದೆ. ಖಾಸಗಿ ವಲಯದ ಬ್ಯಾಂಕಿಗೂ ಸಹಕಾರಿ ಬ್ಯಾಂಕಿಗೂ ಬಹಳಷ್ಟು ವ್ಯತ್ಯಾಸಗಳಿವೆ. ಕಾರ್ಪೋರೇಟ್ ಜಗತ್ತು ಬ್ಯಾಂಕ್ ತೆಗೆಯಲು ಆರ್. ಬಿ. ಐ. ಮುಂದೆ ನಿಂತಿದ್ದರೂ ಸರ್ಕಾರವು ಸಹಕಾರ ವ್ಯವಸ್ಥೆಗೆ ಉತ್ತೇಜನ ನೀಡುತ್ತಿದೆ. ದೇಶಾದ್ಯಂತ ಒಟ್ಟಾರೆ 30ಕೋಟಿ ಜನ ಸಹಕಾರ ಸಂಘದಿ0ದ ನೇರವಾಗಿ, ಪರೋಕ್ಷವಾಗಿ ಲಾಭ ಪಡೆಯುತ್ತಿದ್ದಾರೆ. ಆರ್ಥಿಕವಾಗಿ ದುರ್ಬಲರನ್ನು ಮೇಲಕ್ಕೆತ್ತುವಲ್ಲಿ ಸಹಕಾರ ಸಂಘಗಳ ಪಾತ್ರ ಪ್ರಮುಖವಾಗಿದೆ. ಸದಸ್ಯರಿಂದ ಸದ್ಯರಿಗಾಗಿ ಸದಸ್ಯರೇ ರೂಪಿಸಿಕೊಳ್ಳುವ ನಿಯಮಗಳನುಸಾರ ವ್ಯವಹಾರ ಸಹಕಾರ ಸಂಘಗಳಲ್ಲಿ ನಡೆಯುತ್ತದೆ. ಎಲ್ಲ ಸದಸ್ಯರೂ ಸಂಸ್ಥೆಯಲ್ಲಿ ನಡೆಯುವ ವ್ಯವಹಾರಗಳಲ್ಲಿ ತಮ್ಮ ಅಗತ್ಯಕ್ಕನುಗುಣ ಖರೀದಿಸಿದರೆ ನಿಮ್ಮ ಲಾಭ ನಿಮಗೇ ಸಿಗುತ್ತದೆಂದರು.

ಸ0ಸ್ಥೆಯ ನಿರ್ದೇಶಕರುಗಳು ಉಪಸ್ಥಿತರಿದ್ದರು.