ಕುರುವಳ್ಳಿ ಯುವಕ ಸಂಘದಿಂದ ಧಾರ್ಮಿಕ ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮ್ಮಿಲನದೊಂದಿಗೆ ಸುವರ್ಣ ಮಹೋತ್ಸವದ ಶ್ರೀ ಗಣೇಶೋತ್ಸವ
ತೀರ್ಥಹಳ್ಳಿ : ಇಲ್ಲಿನ ಕುರುವಳ್ಳಿ ಯುವಕ ಸಂಘದ ವತಿಯಿಂದ 50ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸೆ.14ರಿಂದ 26ರತನಕ 13 ದಿನಗಳ ಪರ್ಯಂತ ವಿವಿಧ ರೀತಿಯ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ,. ಕ್ರೀಡಾ ಕಾರ್ಯಕ್ರಮಗಳನ್ನು ಏರ್ಪಡಿಸಿದೆ.
ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ವಿವೇಕ ಮಂಟಪದಲ್ಲಿ ಸ್ಥಳೀಯರಿಗೆ ಅನುಕೂಲಕರ ರೀತಿಯಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಸಭಾಭವನ ನಿರ್ಮಾಣವಾಗುತ್ತಿದ್ದು, ಸಾರ್ವಜನಿಕರಿಗೆ ರಿಯಾಯಿತಿ ಅಥವಾ ಉಚಿತ ಬಳಕೆಗೆ ಅವಕಾಶವಾಗಬೇಕೆಂಬ ಆಶಯದೊಂದಿಗೆ ಗಣೇಶೋತ್ಸವಕ್ಕೆ ಸುಮಾರು ಮುಕ್ಕಾಲು ಕೋಟಿರೂ.ಗಳ ಖರ್ಚು ಅಂದಾಜಿಸಿದ್ದು ಸಾರ್ವಜನಿಕರ ಸಹಕಾರವನ್ನು ಕೋರಿದೆ.
ಸುವರ್ಣ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಸೆ. 23ರಂದು ವೇ|| ಬ್ರ|| ಶ್ರೀ ಸುಬ್ರಹ್ಮಣ್ಯ ಭಟ್ಟರು, ನ್ಯಾಷನಲ್ ಕನ್ಸ್ಸ್ಟçಕ್ಷನ್ನ ಇಬ್ರಾಹೀಂ ಷರೀಫ್, ಪಶುವೈದ್ಯ ಡಾ|| ಪಾವುಲು ಕ್ಯಾಸ್ತೋಲಿನ್, ವಿಟೆಕ್ ಎಂ.ಡಿ. ವಿಶ್ವನಾಥ್ ಕುಂಟುವಳ್ಳಿ ಅಡಿಕೆ ಮೌಲ್ಯ ವರ್ಧಕ ಉತ್ಪನ್ನಗಳ ಸಂಶೋಧಕ ನಿವೇದನ್ ನೆಂಪೆ, ಪಿಯುಸಿ ಯಲ್ಲಿ ಶೇ 97.5ಅಂಕಗಳಿಸಿದ ರಾಷ್ಟಿçಯ ವಾಲೀಬಾಲ್ ಕ್ರೀಡಾಪಟು ಆರ್ಯನ್ ಅನಿಲ್ ಇವರುಗಳಿಗೆ ಗೌರವಾರ್ಪಣೆ ನಡೆಯಲಿದೆ.
