ತೀರ್ಥಹಳ್ಳಿ : ಇಲ್ಲಿನ ಪ್ರತಿಷ್ಠಿತ ಸಹಕಾರ ಸಂಸ್ಥೆಗಳಲ್ಲೊಂದಾದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘವು ತನ್ನ 75ವರ್ಷಗಳನ್ನು ಪೂರೈಸಿರುವ ಸವಿನೆನಪಿಗಾಗಿ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಸೆ.19ರಂದು ಹಮ್ಮಿಕೊಂಡಿದೆ ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ನಾಗರಾಜ ಶೆಟ್ಟಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇವರು 1949ರಲ್ಲಿ ಸ್ಥಾಪನೆಯಾಗಿದ್ದು ಕಳೆದ ವರ್ಷ ಸಂಸ್ಥೆಯ ಚುನಾವಣೆ ವರ್ಷವಾಗಿದ್ದರಿಂದ ಕಾರ್ಯಕ್ರಮವನ್ನು ಹಮ್ಮಿಕೊಂಡಿರಲಿಲ್ಲ. ಈ ೭೫ವರ್ಷಗಳ ಪಯಣವು ಕೇವಲ ಒಂದು ಸಂಭ್ರಮ ಮಾತ್ರವಲ್ಲ. ರೈತ ಬಂಧುಗಳು ಮತ್ತು ಷೇರುದಾರರು ಮತ್ತು ಆಡಳಿತ ಮಂಡಳಿಯ ನಡುವಿನ ಅಚಲ ವಿಶ್ವಾಸದ ಸಂಕೇತ. ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಹಾಗೂ ಕೃಷಿ ಸೇವೆಗಳಿಗೆ ಬೆನ್ನೆಲುಬಾಗಿ ಸಂಸ್ಥೆ ನಿಂತಿದೆ. ಸುವರ್ಣ ಮಹೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ, ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಮಂಜುನಾಥಗೌಡ, ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಮಾಜಿ ಶಾಸಕ ಕಡಿದಾಳು ದಿವಾಕರ್, ಸಹಕಾರ ಮಾರ್ಕೆಟಿಂಗ್ ಫೆಡರೇಷನ್ ನಿರ್ದೇಶಕ ಅಗಡಿ ಅಶೋಕ್, ಮ್ಯಾಮ್ಕೋಸ್ ಉಪಾಧ್ಯಕ್ಷ ಹುಲ್ಕುಳಿ ಮಹೇಶ್, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಹೆಚ್. ಎನ್. ವಿಜಯದೇವ್, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ವೆಂಕಟೇಶ್, ಪ.ಪಂ. ಅಧ್ಯಕ್ಷ ರತ್ನಾಕರ ಶೆಟ್ಟಿ, ಸಹಕಾರ ಸಂಘಗಳ ಉಪನಿಬಂಧಕರಾದ ನಾಗಭೂಷಣ ಚಂದ್ರಶೇಖರ ಕಲ್ಮನೆ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಕೆ.ಎಸ್.ಶಿವಕುಮಾರ್, ಅಭಿನಂದನ್, ಹರೀಶ್ ಡಿ.ಜಿ., ಚಕ್ಕೋಡಬೈಲು ರಾಘವೇಂದ್ರ ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಬಸವಾನಿ ವಿಜಯದೇವ್, ಕಾರ್ಯದರ್ಶಿ ರಚನಾ ಹೆಚ್. ಜಿ. ಉಪಸ್ಥಿತರಿದ್ದರು.
