ತೀರ್ಥಹಳ್ಳಿ : ಪೋಲೀಸ್ ಇಲಾಖೆ ಎಷ್ಟು ಸಂಯಮದಿ0ದ ವರ್ತಿಸುತ್ತದೋ ಅಷ್ಟು ಶಾಂತಿ ಸಮಾಜದಲ್ಲಿರುತ್ತದೆ ಎಂದು ಮಾಜಿಗೃಹ ಸಚಿವ ಶಾಸಕ ಆರಗಜ್ಞಾನೇಂದ್ರ ಹೇಳಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಇವರು ಕಾಯಿದೆ ತಪ್ಪಿದಾಗ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಟಿ. ನರಸೀಪುರದ ವೃತ್ತನಿರೀಕ್ಷಕರು ಗಣೇಶೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಸೀದಿ ಎದುರು ಹೋಗಬಾರದು, ಹಾಗೇನಾದರೂ ಆದರೆ ಗ್ರಹಚಾರ ಬಿಡಿಸುತ್ತೇನೆ ಎಂಬರ್ಥದಲ್ಲಿ ವರ್ತಿಸಿರುವುದು ಖಂಡನಾರ್ಹ, ರೌಡಿ ಮತ್ತು ಪೋಲೀಸ್ ಅಧಿಕಾರಿಯ ವ್ಯತ್ಯಾಸ ಜನ ಗಮನಿಸುತ್ತಾರೆ. ಈ ರೀತಿಯ ಮಾತನ್ನು ನಾಗರಿಕ ಸಮಾಜ ಒಪ್ಪಲು ಸಾಧ್ಯವಿಲ್ಲ. ಮಸೀದಿ ರಸ್ತೆ ಆದರೆ ಅದು ಕೂಡಾ ಸಾರ್ವಜನಿಕ ರಸ್ತೆ ಇದು ಭಾರತದಲ್ಲೇ ಇದೆ. ಹಿರಿಯ ಅಧಿಕಾರಿಗಳು ಈ ವೃತ್ತನಿರೀಕ್ಷಕರ ವಿರುದ್ಧ ಕ್ರಮಕೈಗೊಳ್ಳಬೇಕು. ವೃತ್ತನಿರೀಕ್ಷಕರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ.