ಮಲೆನಾಡು • ಸ್ಥಳೀಯ ಸುದ್ದಿ • ಕನ್ನಡದ ಧ್ವನಿ ಪ್ರತಿಬಿಂಬ
ನಮ್ಮ ಊರಿನ ಸುದ್ದಿ — ನಮ್ಮ ಧ್ವನಿ
ತಾಜಾ ಸುದ್ದಿ
ಪ್ರತಿಬಿಂಬಕ್ಕೆ ಸ್ವಾಗತ • ಸ್ಥಳೀಯ ಮತ್ತು ಮಲೆನಾಡಿನ ಸುದ್ದಿಗಳನ್ನು ವೇಗವಾಗಿ ಓದಿ

ಅಗ್ಗದ ಬಡ್ಡಿಗೆ ಸುಲಭಸಾಲ ನೀಡಿ ಸುವರ್ಣ ಮಹೋತ್ಸವ ಸಮಾರಂಭಕ್ಕೆ ಸಜ್ಜಾದ ಅಂಬುತೀರ್ಥ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ





ತೀರ್ಥಹಳ್ಳಿ : ಇಲ್ಲಿನ ಅಂಬುತೀರ್ಥ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 14ಸೆ1976ರಂದು ಪ್ರಾರಂಭಗೊ0ಡು 50ವರ್ಷಗಳನ್ನು ಪೂರೈಸಿದೆ. ಎಂದು ಸಂಸ್ಥೆಯ ಅಧ್ಯಕ್ಷ ಕೆ. ಎಸ್. ನಾರಾಯಣರಾವ್ ಕಲ್ಲೋಣಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇವರು ಸೆ. 20ರಂದು ಸುವರ್ಣ ಮಹೋತ್ಸವ ಅಂಗವಾಗಿ ಅರಳಸುರಳಿಯಲ್ಲಿ ನೂತನ ವ್ಯಾಪಾರಶಾಖೆ ಉದ್ಘಾಟನೆ ಮತ್ತು ಸುವರ್ಣ ಸಹಕಾರ ಸೌಧಧ ಶಂಕುಸ್ಥಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

ಅರಳಸುರಳಿಯ ನೂತನ ವ್ಯಾಪಾರಶಾಖೆಯನ್ನು ಶಾಸಕ ಆರಗ ಜ್ಞಾನೇಂದ್ರ ಉದ್ಘಾಟಿಸಲಿದ್ದು, ಸುವರ್ಣ ಸೌಧಕ್ಕೆ ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಆರ್. ಎಂ. ಮಂಜುನಾಥಗೌಡ ಶಂಖುಸ್ಥಾಪನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಹೆಚ್. ಆರ್. ವೆಂಕಟೇಶ್, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಹೆಚ್. ಎನ್. ವಿಜಯದೇವ್, ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ನಾಗರಾಜ ಶೆಟ್ಟಿ  ಪಾಲ್ಗೊಳ್ಳಲಿದ್ದಾರೆ. 

ಶಿವಮೊಗ್ಗ ಡಿ.ಸಿ.ಸಿ. ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಕ ರಾಜಣ್ಣ ರೆಡ್ಡಿ, ಸಹಕಾರ ಸಂಘಗಳ ಉಪನಿಬಂಧಕ ನಾಗಭೂಷಣ ಚಂದ್ರಶೇಖರ ಕಲ್ಮನೆ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಶ್ರೀನಿವಾಸ್, ಸಹಕಾರ ಅಭಿವೃದ್ಧಿ ಅಧಿಕಾರಿ ವೆಂಕಟಾಚಲಪತಿ ಉಪಸ್ಥಿತರಿರುತ್ತಾರೆಂದು ತಿಳಿಸಿದರು.

ಸದಸ್ಯರು ಮರಣಹೊಂದಿದಲ್ಲಿ ತಕ್ಷಣ ಅವರ ಕುಟುಂಬಕ್ಕೆ 5000ನೀಡುವ ಮರಣೋತ್ತರ ನಿಧಿ ಯೋಜನೆ ಸಂಸ್ಥೆಯಲ್ಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ರಾಘವೇಂದ್ರ, ಚಂದ್ರಶೇಖರ್, ಚಂದ್ರಪ್ಪಗೌಡ, ಬಾಲಸುಬ್ರಹ್ಮಣ್ಯ, ಲಿಂಗರಾಜು, ಪ್ರಸನ್ನ, ರವಿ, ವಿಜೇಂದ್ರ, ಯೋಗೇಂದ್ರನಾಯ್ಕ್, ವೇದಾವತಿ ಪ್ರಭಾರ ಸಿಇಒ ಆದರ್ಶ ಉಪಸ್ಥಿತರಿದ್ದರು.



ಸಂಸ್ಥೆಯ ಕುರಿತು : 

2329 ಸದಸ್ಯರನ್ನು ಹೊಂದಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ 100ಕೋಟಿಗೂ ಹೆಚ್ಚು ವ್ಯವಹಾರಮಾಡಿ 73.57ಲಕ್ಷ ಲಾಭಗಳಿಸಿ ಸದಸ್ಯರಿಗೆ ಶೇ25ರ ಡಿವಿಡೆಂಡ್ ಘೋಷಣೆಮಾಡಿದೆ.ವ್ಯಾಪಾರ ವಿಭಾಗದಿಂದ ರೈತರು ಕಡಿಮೆ ದರದಲ್ಲಿ ವಸ್ತುಗಳನ್ನು ಕೊಂಡುಕೊಳ್ಳುತ್ತಿದ್ದು ಸದಸ್ಯರಿಗೆ ಸಾಲದ ರೂಪದಲ್ಲೂ ವಸ್ತುಗಳ ಖರೀದಿಗೆ ಅವಕಾಶಕಲ್ಪಿಸಲಾಗಿದೆ. ಆಡಳಿತ ಮಂಡಳಿ ಸಭೆಗಳು ಶೇ100ರ ಕೋರಂನೊ0ದಿಗೆ ನಿಗದಿತ ಸಮಯಕ್ಕೇ ನಡೆಸುವ ಶಿಸ್ತು ಹೊಂದಿದೆ. ಸೆ.21ರಂದು ಕಟ್ಟಡಕ್ಕೆ ಶಂಖುಸ್ಥಾಪನೆ ನೆರವೇರಲಿದ್ದರೂ ಪೂರ್ವ ನಿಯೋಜಿತವಾಗಿ 1,24,14,644ರೂಗಳನ್ನು ಕಟ್ಟಡನಿಧಿಯಲ್ಲಿ ಕಾಯ್ದಿರಿಸಿದೆ. ಸುವರ್ಣ ಮಹೋತ್ಸವಕ್ಕೆ ಪ್ರತಿವರ್ಷವೂ ಹಣವನ್ನು ಕಾಯ್ದಿರಿಸುತ್ತಾ 33ಲಕ್ಷರೂ.ಗಳ ನಿಧಿಯನ್ನು ಮೀಸಲಿರಿಸಿದೆ. ಸಂಸ್ಥೆಯು ಸದಸ್ಯರಿಗೆ ಠೇವಣಿಮೇಲೆ 1,08,66,836ರೂ. ಬಡ್ಡಿ ನೀಡಿದ್ದರೆ ತಾನಿಟ್ಟ ಡಿಪಾಸಿಟ್ ಮೂಲಕ 77,99,234ರೂ. ಗಳಿಸಿದೆ. ಸ್ವಂತ ಬಂಡವಾಳದಲ್ಲಿ ನೀಡಿದ ಕೆ.ಸಿ.ಸಿ.ಎಲ್. ಸಾಲಕ್ಕೆ ಸರ್ಕಾರದ 45,25,052ರೂ. ಬಂದಿದ್ದು 12324286 ಬಡ್ಡಿ ಗಳಿಸಿದೆ. ಇದು ಸಂಸ್ಥೆಯ ಆಡಳಿತ ಮಂಡಳಿಯ ಹಣಕಾಸು ನಿರ್ವಹಣೆಯ ಶಿಸ್ತನ್ನು ತೋರಿಸುತ್ತದೆ. ಎಲ್ಲ ಖರ್ಚುಗಳು ಮತ್ತು ಕಾಯ್ದಿರಿಸಿದ ನಿಧಿಗಳಲ್ಲದೇ 73,57,440ರೂ. ಲಾಭಗಳಿಸಿದೆ. ಸಾಲವಸೂಲಾತಿಯಲ್ಲಿ ಶೇ98ಕ್ಕಿಂತ ಹೆಚ್ಚಿದ್ದು. ಇದುವರೆಗೂ ಒಂದೇ ಒಂದು ವ್ಯಾಜ್ಯವೂ ನ್ಯಾಯಾಲಯದ ಮೆಟ್ಟಿಲೇರಿರುವುದಿಲ್ಲ ಎಂಬುದು ಅತ್ಯದ್ಭುತಗಳಲ್ಲೊಂದೆ0ದು ಬಣ್ಣಿಸಬಹುದಾಗಿದೆ.