ತೀರ್ಥಹಳ್ಳಿ: 2025ರ ಮೊದಲ ಅಂಧರಮಹಿಳಾ ಟಿ-20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡವು, ಆಟದ ರಣ-ರೋಚಕ ಸುತ್ತಿನಲ್ಲಿ ನೇಪಾಳ ತಂಡವನ್ನು ಮಣಿಸಿ, ಅಂಧರ ಮಹಿಳಾ ಕ್ರಿಕೆಟ್ನ ಮೊದಲ ವಿಶ್ವಕಪ್ ಗೆದ್ದು ಭಾರತದ ಅಸಂಖ್ಯಾತ ಕ್ರೀಡಾ ಪ್ರೇಮಿಗಳ ಪ್ರಶಂಸೆಗೆ ಪಾತ್ರವಾಗಿತ್ತು, ಈ ತಂಡದಲ್ಲಿ ಒಬ್ಬ ಪ್ರಮುಖ ಆಟಗಾರ್ತಿಯಾಗಿ ಶಿವಮೊಗ್ಗ ಜಿಲ್ಲೆಯ ರಿಪ್ಪನಪೇಟೆ ಸಮೀಪದ ಬರುವೆ ಗ್ರಾಮದ ಕು|| ಕಾವ್ಯ ರವರಿಗೆ ಇಲ್ಲಿನ ಮಲೆನಾಡು ವಿಶ್ವಕರ್ಮ ವಿವಿದ್ದೋದ್ದೇಶ ಸೌಹಾರ್ದ ಸಹಕಾರಿಯು, ಅದರ ಸದಸ್ಯರ ಕರತಾಡನಗಳೊಂದಿಗೆ ಹೃದಯಪೂರ್ವಕವಾಗಿ ಸನ್ಮಾನಿಸಿ ಗೌರವಿಸಿತು.
ಸಹಕಾರಿಯ ಅಧ್ಯಕ್ಷರಾದ .ಟಿ.ಜಿ.ವಿಶ್ವೇಶ್ವರ ತುಂಬೆಸರ ರವರ ಅಧ್ಯಕ್ಷತೆಯಲ್ಲಿ ಈ ಸನ್ಮಾನ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಕರ್ನಾಟಕ ರಾಜ್ಯ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಶಿವಮೊಗ್ಗ ಜಿಲ್ಲಾ ನಿರ್ದೇಶಕರಾದ ಶ್ರೀಮತಿ ಜಯಶೀಲ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ರತ್ನಾಕರ ಶೆಟ್ಟಿ ಮತ್ತು ಸಹಕಾರಿಯ ಅಧ್ಯಕ್ಷರು ಅಂಧ ಮಹಿಳಾ ಕ್ರಿಕೆಟ್ ತಂಡದ ಪ್ರಮುಖ ಆಟಗಾರ್ತಿ ಕು|| ಕಾವ್ಯ.ವಿ ಬರುವೆಯವರನ್ನು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ. ಪಂ. ಅಧ್ಯಕ್ಷ ರತ್ನಾಕರ ಶೆಟ್ಟಿ ಕು|| ಕಾವ್ಯ ರವರ ಸಾಧನೆಯನ್ನು ತಾವು ತಿಳಿದುಕೊಂಡಿದ್ದು, ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಮತ್ತು ಇಲ್ಲಿನ ಅಭಿಮಾನಿಗಳ ಪರವಾಗಿ ಅಭಿನಂಧಿಸುತ್ತಿದ್ದೇನೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದ ಜಯಶೀಲರವರು ಕು|| ಕಾವ್ಯ ರವರ ಸಾಧನೆಯು ಅಂಗವಿಕಲ ಮಕ್ಕಳಿಗೆ ಎಷ್ಟು ಸ್ಫೂರ್ತಿದಾಯಕವಾಗಿದೆ ಎಂದು ಹೇಳಿದರು. ತಾವು ಪ್ರತಿನಿಧಿಸುತ್ತಿರುವ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ನಿಗಮದಿಂದ ಏನೇನು ಸರ್ಕಾರಿ ಸೌಲತ್ತುಗಳನ್ನು ಪಡೆದುಕೊಂಡು ಸದುಪಯೋಗ ಪಡಿಸಿಕೊಳ್ಳಬಹುದೆಂದು ವಿವರಿಸಿದರು.
ಸನ್ಮಾನಿತಾರಾದ ಕು|| ಕಾವ್ಯ ರವರ ಬದುಕು, ಶಿಕ್ಷಣ ಮತ್ತು ಸಾಧನೆ ಕುರಿತು, ಸಭಾಧ್ಯಕ್ಷರಾದ ಟಿ.ಜಿ.ವಿಶ್ವೇಶ್ವರ ರವರು ಪರಿಚಯ ನುಡಿಗಳನ್ನಾಡಿ ಕು|| ಕಾವ್ಯ ರವರ ಗ್ರಾಮೀಣ ಪರಿಸರದ ಕೃಷಿಕಾರ್ಮಿಕರಾದ ಅವರ ತಂದೆ-ತಾಯಿ ಬರುವೆ ವೆಂಕಟೇಶಾಚಾರ್ ಮತ್ತು ಜಯಮ್ಮ ದಂಪತಿಗಳ ಮಕ್ಕಳ ಐವರು ಸಹೋದರಿಯರಲ್ಲಿ ಒಬ್ಬರು ಎಂದರು. ದೃಷ್ಠಿ ವೈಖಲ್ಯ ಹಾಗೂ ಸಾಧನೆಗಳನ್ನು ಸಭೆಗೆ ಪರಿಚಯಿಸಿದರು. ಬೆಂಗಳೂರು ನಗರ ವಿಶ್ವವಿದ್ಯಾನಿಲಯದಲ್ಲಿ ಹಾಲಿ ಎಂ.ಎ. ವಿಧ್ಯಾರ್ಥಿಯಾಗಿರುವ ಕು|| ಕಾವ್ಯ ಈಗಾಗಲೇ 7 ಅಂತರಾಷ್ಟಿçಯ ಪಂದ್ಯಾವಳಿಯಲ್ಲಿ ಭಾಗವಹಿಸಿರುತ್ತಾರೆ.
ಸನ್ಮಾನಿತರಾದ ಕು|| ಕಾವ್ಯ ಮಾತನಾಡಿ ತಮ್ಮ ಬದುಕು ಮತ್ತು ಶಿಕ್ಷಣ ಸಾಧನೆಗಳಲ್ಲಿ ದೃಷ್ಠಿ ವೈಖಲ್ಯ ಹಾಗೂ ಪೋಷಕರ ಬಡತನವನ್ನು ಹೇಗೆ ಸವಾಲಾಗಿ ಸ್ವೀಕರಿಸಿ ಈಗ ಈ ಹಂತವನ್ನು ತಲುಪಿದ ಬಗೆಯನ್ನು ಈ ಪಯಣದಲ್ಲಿ ಶಿವಮೊಗ್ಗ ಶಾರದಾ ಅಂಧರ ಶಾಲೆ, ಬೆಂಗಳೂರು ಕಾಲೇಜು, ಸಮರ್ಥನ ಅನ್ನುವ ಸಂಸ್ಥೆಗಳು ತಮ್ಮ ವ್ಯಕ್ತಿತ್ವವನ್ನು ಹೇಗೆ ಕಟ್ಟಿಕೊಳ್ಳುವುದು ಎಂದು ತಿಳಿಸಿ ಮುನ್ನಡೆಯಲು ಸಹಕರಿಸಿದವು. ಎಂದು ತಿಳಿಸಿದರು.
ಕು|| ರಶ್ಮಿ.ಕೆ.ಎನ್ ಹಾಗೂ ಕು|| ಆಶ್ರಿತಾ.ಹೆಚ್.ಜೆ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾದ ಕಾರ್ಯಕ್ರಮಕ್ಕೆ ಸಹಕಾರಿಯ ಅಧ್ಯಕ್ಷರಾದ ಟಿ.ಜಿ.ವಿಶ್ವೇಶ್ವರ ರವರು ಸ್ವಾಗತಿಸಿದರು. ಉಪಾಧ್ಯಕ್ಷರಾದ ಶ್ರೀಮತಿ.ಪುಷ್ಪಾನಾಗೇಶ್ ರವರು ವಂಧಿಸಿದರು. ಮಾಜಿ ನಿರ್ದೇಶಕರಾದ ಎಲ್.ಶ್ರೀಧರ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.
ವೇಧಿಕೆಯಲ್ಲಿ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕರಾದ ರಿಪ್ಪನಪೇಟೆಯ ದೇವ್ದಾಸ್, ಸಹಕಾರಿಯ ಮಾಜಿ ಉಪಾಧ್ಯಕ್ಷ ಎಂ.ಪಿ.ಕುಮಾರ್, ನಿರ್ದೇಶಕರಾದ ದಿನೇಶ್, ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಭಾರತಿ ಉಪಸ್ಥಿತರಿದ್ದರು.
