ಮಲೆನಾಡು • ಸ್ಥಳೀಯ ಸುದ್ದಿ • ಕನ್ನಡದ ಧ್ವನಿ ಪ್ರತಿಬಿಂಬ
ನಮ್ಮ ಊರಿನ ಸುದ್ದಿ — ನಮ್ಮ ಧ್ವನಿ
ತಾಜಾ ಸುದ್ದಿ
ಪ್ರತಿಬಿಂಬಕ್ಕೆ ಸ್ವಾಗತ • ಸ್ಥಳೀಯ ಮತ್ತು ಮಲೆನಾಡಿನ ಸುದ್ದಿಗಳನ್ನು ವೇಗವಾಗಿ ಓದಿ

ದೇಶಕ್ಕೆ 12 ವರ್ಷದಿಂದ ಪರಿವರ್ತನೆ ನೀಡಿದ ಮಹಾನ್ ವ್ಯಕ್ತಿತ್ವ ಮೋದಿಯದ್ದು - ಆರಗ ಜ್ಞಾನೇಂದ್ರ


ನರೇ0ದ್ರ ಮೋದಿಯವರ ಈ ಹುಟ್ಟುಹಬ್ಬ ಆಚರಣೆ ಕೇವಲ ಒಬ್ಬ ವ್ಯಕ್ತಿಯದ್ದಲ್ಲ. ದೇಶಕ್ಕೆ 12ವರ್ಷಗಳಿಂದ ಪರಿವರ್ತನೆ ಕೊಟ್ಟಂತಹಾ ಮಹಾನ್ ವ್ಯಕ್ತಿತ್ವ ಪ್ರಧಾನಿಯವರದ್ದು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ತೀರ್ಥಹಳ್ಳಿ ಮಾರಿಕಾಂಬಾ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಇವರು ಇನ್ನಷ್ಟು ದೇಶಸೇವೆ ಮಾಡಿ ಜನರ ಬದುಕಿಗೆ ಅರ್ಥಪೂರ್ಣವಾದ ಶಕ್ತಿ ನೀಡುವಂತಹಾ ಶಕ್ತಿ ಮೋದಿಯವರಿಗೆ ಬರಲಿ ಎಂದು ಪ್ರಾರ್ಥಿಸಿ ಬಿಜೆಪಿ ವತಿಯಿಂದ ಮೋದಿಯವರ ಹುಟ್ಟುಹಬ್ಬ ಆಚರಿಸಲಾಗುತ್ತಿದೆ. ಒಂದು ತಿಂಗಳ ಕಾಲ ಸೇವಾ ಸಂಕಲ್ಪ ಅಭಿಯಾನ ಅರಂಭಿಸಲಾಗಿದೆ ಎಂದು ತಿಳಿಸಿದರು.