ಇಲ್ಲಿನ ತುಳುನಾಡುಸಿರಿ ಸೌಹಾರ್ದ ಸಹಕಾರಿ ತನ್ನ10ನೇ ವರ್ಷದ ಸರ್ವಸದಸ್ಯರ ಸಭೆಯನ್ನು ಸೆ.23ರಂದು ಇಲ್ಲಿನ ಮಾಧವ ಮಂಗಲಸಭಾಭವನದಲ್ಲಿ ಏರ್ಪಡಿಸಿದೆ. ಸಂಸ್ಥೆಯ ಅಧ್ಯಕ್ಷ ಬಿ ಆರ್ ರಾಘವೇಂದ್ರಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಮಹಾಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ಜಿಲ್ಲಾಬ್ಯಾಂಕ್ ಅಧ್ಯಕ್ಷ ಆರ್. ಎಂ. ಮಂಜುನಾಥಗೌಡ ಮತ್ತು ಡಿಸಿಸಿ ಬ್ಯಾಂಕ್ ನಿರ್ದೇಶಕ ಹೆಚ್. ಎನ್. ವಿಜಯದೇವ್ ಪಾಲ್ಗೊಳ್ಳಲಿದ್ದಾರೆ.
ಸಹಕಾರಿಯ ಆಡಳಿತ ಮಂಡಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರಿದ್ದು, ಅವರಲ್ಲಿ ಕೆಲವರು ಸಹಕಾರ ಕ್ಷೇತ್ರದ ಮೊದಲ ಅನುಭವವನ್ನೇ ಈ ಸಂಸ್ಥೆಯ ಮೂಲಕ ಪಡೆದಿದ್ದಾರೆ. ಆರಂಭದಿಂದಲೂ ರಾಘವೇಂದ್ರ ಶೆಟ್ಟಿ ಅವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಕೆಲವೇ ವರ್ಷಗಳಲ್ಲಿ ಸಂಸ್ಥೆ ಗಮನಾರ್ಹ ಪ್ರಗತಿ ಸಾಧಿಸಿದೆ.
ಕೇವಲ ನಾಲ್ಕಾರು ವರ್ಷಗಳಲ್ಲಿಯೇ ಕೋಟಿ ಸಮೀಪದ ಷೇರುಧನವನ್ನು ಸಂಗ್ರಹಿಸಿದೆ. ಸಹಕಾರಿಯ ಆರಂಭದಲ್ಲೇ3ಕೋಟಿಗೂ ಹೆಚ್ಚು ಸಾಲವನ್ನು ತನ್ನ ಸದಸ್ಯರಿಗೆ ನೀಡಿತ್ತು. ಪ್ರಸಕ್ತ ಸಾಲಿನಲ್ಲಿ 1664ಸದಸ್ಯ ಬಲದೊಂದಿಗೆ 1.26ಕೋಟಿ ಷೇರು ಧನ ಸಂಗ್ರಹಿಸಿದ್ದು 40.56ಲಕ್ಷ ನಿವ್ವಳಲಾಭಗಳಿಸಿದೆ. ಪ್ರಸಕ್ತ ಸಾಲಿನಲ್ಲಿ 33 ಕೋಟಿಗೂ ಹೆಚ್ಚು ವ್ಯವಹಾರ ದಾಖಲಿಸಿದೆ.
ದಶಮಾನೋತ್ಸವ ಸಮಾರಂಭದ ಪ್ರಯುಕ್ತ ಸಹಕಾರಿಯ ಮಹಿಳಾ ಸದಸ್ಯರಿಗೆ ಬಳೆಹಬ್ಬವನ್ನೂ ಆಯೋಜಿಸಿದೆ. ಇದರ ಅಂಗಸ0ಸ್ಥೆ ತುಳುನಾಡು ಮಹಿಳಾಪತ್ತಿನ ಸಹಕಾರಸಂಘವು ಮೊದಲ ವರ್ಷ ಪೂರೈಸಿದ್ದು 800ಕ್ಕೂ ಹೆಚ್ಚು ಸದಸ್ಯ ಬಲವನ್ನು ಹೊಂದಿದೆ.
ಸಿಬ್ಬಂದಿ ಸೇವಾದಕ್ಷತೆ ಮತ್ತು ಆಡಳಿತ ಮಂಡಳಿಯು ದಿನೇದಿನೇ ವಿಶ್ವಾಸ ವೃದ್ಧಿಸಿಕೊಂಡು ತನ್ನ ವ್ಯವಹಾರವನ್ನು ವಿಸ್ತರಿಸಿಕೊಳ್ಳುತ್ತಿದ್ದು, ಕಳೆದ ಮಹಾಸಭೆಗಳಲ್ಲಿ ಆರ್. ಎಂ. ಮಂಜುನಾಥಗೌಡ ಸೇರಿದಂತೆ ಹಿರಿಯ ಸಹಕಾರಿಗಳೂ ಕೂಡಾ ಸಹಕಾರಿಯ ಹಣಕಾಸು ನಿರ್ವಹಣೆ ಮತ್ತು ವ್ಯವಹಾರ ಅಭಿವೃದ್ಧಿ ಲಾಭವನ್ನು ಪ್ರಶಂಸಿಸಿ ರಾಘವೇಂದ್ರಶೆಟ್ಟಿಯವರ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
.jpg)